ಯು ಮುಂಬಾಗೆ ತಲೆಬಾಗಿದ ದಬಾಂಗ್ ದಿಲ್ಲಿ

Update: 2018-12-11 18:56 GMT

ವಿಶಾಖಪಟ್ಟಣ, ಡಿ.11: ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಯು ಮುಂಬಾ ತಂಡ ಸಿದ್ದಾರ್ಥ್ ದೇಸಾಯಿ ಗಳಿಸಿದ ಅಮೋಘ 12 ಅಂಕಗಳ ನೆರವಿನಿಂದ ಪ್ರೊ ಕಬಡ್ಡಿ ಲೀಗ್‌ನಲ್ಲಿ ದಬಾಂಗ್ ದಿಲ್ಲಿಯನ್ನು 44-19 ಅಂಕಗಳ ಅಂತರದಿಂದ ಸುಲಭವಾಗಿ ಮಣಿಸಿತು. ಇಲ್ಲಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬಾ ಪರ ಸಿದ್ದಾರ್ಥ್ ದೇಸಾಯಿ 10 ರೈಡಿಂಗ್ ಅಂಕಗಳು ಹಾಗೂ 2 ಬೋನಸ್‌ನೊಂದಿಗೆ ಒಟ್ಟು 12 ಅಂಕಗಳನ್ನು ಗಳಿಸಿ ಮಿಂಚಿದರೆ, ರೋಹಿತ್ ಬಲಿಯಾನ್ 8 ಅಂಕ ಹಾಗೂ ಫಝಲ್ ಅಟ್ರಾಚಲಿ 5 ಅಂಕ ಸಂಪಾದಿಸಿ ಉತ್ತಮ ಸಾಥ್ ನೀಡಿದರು. ದಿಲ್ಲಿ ಪರ ಶಬೀರ್ ಬಾಬು, ಸತ್ಪಾಲ್ ಹಾಗೂ ಚಂದ್ರನ್ ರಂಜಿತ್ ತಲಾ 5 ಅಂಕ ಗಳಿಸಿದರು.

<ಪ್ರಶಾಂತ್ ರೈಗೆ 8 ಅಂಕ: ಮತ್ತೊಂದು ಪಂದ್ಯದಲ್ಲಿ ಯಪಿ ಯೋಧಾ ತಂಡ ತೆಲುಗು ಟೈಟಾನ್ಸ್ ತಂಡವನ್ನು 27-20 ಅಂಕಗಳಿಂದ ಸೋಲಿಸಿತು. ಯೋಧಾ ಪರ ಕನ್ನಡಿಗ ಪ್ರಶಾಂತ್‌ಕುಮಾರ್ ರೈ 8 ಅಂಕ ಸಂಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News