ಶಕ್ತಿಕಾಂತ್ ದಾಸ್ ನೇಮಕ ಬಗ್ಗೆ ಎಂಐಟಿ ಆರ್ಥಿಕ ತಜ್ಞ ಹೇಳಿದ್ದೇನು ಗೊತ್ತೇ ?

Update: 2018-12-12 04:25 GMT
ಪ್ರೊ. ಅಭಿಜಿತ್ ಬ್ಯಾನರ್ಜಿ

ಹೊಸದಿಲ್ಲಿ, ಡಿ. 12: ನಿವೃತ್ತ ಅಧಿಕಾರಿ ಶಕ್ತಿಕಾಂತ ದಾಸ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ನೇಮಕ ಮಾಡಿರುವ ಸರ್ಕಾರದ ಕ್ರಮವನ್ನು ಭಾರತೀಯ ಸಂಜಾತ ಅರ್ಥಶಾಸ್ತ್ರಜ್ಞ ಹಾಗೂ ಮೆಸೆಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ಅಭಿಜಿತ್ ಬ್ಯಾನರ್ಜಿ ಟೀಕಿಸಿದ್ದಾರೆ.

ಈ ನಿರ್ಧಾರ ಪ್ರಮುಖ ಸರ್ಕಾರಿ ಸಂಸ್ಥೆಯ ಆಡಳಿತದ ಬಗ್ಗೆ ಆತಂಕಕಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಎಚ್ಚರಿಸಿದ್ದಾರೆ. ಆರ್‌ಬಿಐ ಸೇರಿದಂತೆ ಪ್ರಮುಖ ಸಾರ್ವಜನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ವೃದ್ಧಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ. ನೋಟು ರದ್ದತಿ ಸಂದರ್ಭದಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ದಾಸ್ ಅವರ ನೇಮಕಾತಿ ಬಗ್ಗೆ ಕೇಳಿದ ಪ್ರಶ್ನೆಗೆ, ಬ್ಯಾನರ್ಜಿ ತಕ್ಷಣಕ್ಕೆ ನೀಡಿದ ಪ್ರತಿಕ್ರಿಯೆ, "ಸಂಸ್ಥೆಯ ಆಡಳಿತಾತ್ಮಕ ಫಲಿತಾಂಶ ಆತಂಕಕಾರಿ" ಎಂದಾಗಿತ್ತು.

ಸಂಸ್ಥೆಗಳು ಇರುವುದೇ ತಾಳ್ಮೆಗಾಗಿ. ಇದನ್ನು "ನಾನು ಮಾಡಲು ಬಯಸಿದ್ದರೂ, ಅದನ್ನು ನಾನು ಮಾಡುವಂತಿಲ್ಲ; ಏಕೆಂದರೆ ನನ್ನ ಕೈಗಳು ಕಟ್ಟಲ್ಪಟ್ಟಿವೆ ಎಂದುಕೊಳ್ಳಬಹುದು. ನಾವು ನಮ್ಮ ಕೈಗಳನ್ನು ಬಿಗಿಯಾಗಿ ಕಟ್ಟಿಕೊಳ್ಳಬೇಕು. ಆದರೆ ಇದು ಕೈಗಳನ್ನು ಸಡಿಲ ಬಿಟ್ಟಂತಾಗಿದೆ" ಎಂದು ಹೇಳಿದರು.

ಊರ್ಜಿತ್ ಪಟೇಲ್ ಅವರ ದಿಢೀರ್ ರಾಜೀನಾಮೆ ಬಗ್ಗೆ ಪ್ರಶ್ನಿಸಿದಾಗ, "ಇದು ಸಾಂಸ್ಥಿಕ ಒತ್ತಡದ ಲಕ್ಷಣ ಎನ್ನುವುದಾದರೆ ಎಲ್ಲರೂ ಆತಂಕಪಡಬೇಕಾದ ವಿಚಾರ" ಎಂದು ಉತ್ತರಿಸಿದರು. ಯುಪಿಎ ಅವಧಿಯ ಪ್ರಗತಿದರವನ್ನು ಕುಂಠಿತಗೊಳಿಸಿ ತೋರಿಸಲು ಅನುವಾಗುವಂತೆ ಜಿಡಿಪಿ ಲೆಕ್ಕಾಚಾರ ಕ್ರಮವನ್ನು ಬದಲಿಸಿದ ಬಗ್ಗೆ ಕೇಳಿದಾಗ, ಕೇಂದ್ರ ಅಂಕಿ ಸಂಖ್ಯೆಗಳ ಅಧಿಕಾರಿ ಈ ಪ್ರಮುಖ ಕೆಲಸವನ್ನು ಹಲವು ದಶಕಗಳಿಂದ ಮಾಡುತ್ತಿದ್ದಾರೆ. ಆದರೆ ಸಂಸ್ಥೆಯ ವಿಶ್ವಾಸಾರ್ಹತೆ ಉಳಿಸುವ ಅಗತ್ಯವಿದೆ ಎಂದು ಮಾರ್ಮಿಕವಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News