ಆರ್ ಬಿ ಐ ಗವರ್ನರ್ ಆಗಿ ಶಕ್ತಿಕಾಂತ ದಾಸ್ ನೇಮಕಾತಿ ತಪ್ಪು: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ

Update: 2018-12-12 10:21 GMT

ಹೊಸದಿಲ್ಲಿ, ಡಿ. 12: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಅವರ ನೇಮಕಾತಿ ತಪ್ಪು ಎಂದು ಹೇಳಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಅವರ ನೇಮಕಾತಿಯನ್ನು ವಿರೋಧಿಸಿ ತಾವು ಪ್ರಧಾನಿಗೆ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ.

''ದಾಸ್ ಅವರು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ಭ್ರಷ್ಟ ಕಾರ್ಯಗಳ ಜತೆ ಕೈ ಜೋಡಿಸಿದ್ದರು ಹಾಗೂ ಅವರನ್ನು ಕೋರ್ಟ್ ಪ್ರಕರಣಗಳಿಂದ ಬಚಾವ್ ಮಾಡಿದ್ದರು,'' ಎಂದು ಸ್ವಾಮಿ ಆರೋಪಿಸಿದ್ದಾರೆ.

ಸೋಮವಾರ ಆರ್ ಬಿ ಐ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಾಗ ಕಳವಳ ವ್ಯಕ್ತಪಡಿಸಿದ್ದ ಸುಬ್ರಹ್ಮಣ್ಯನ್ ಸ್ವಾಮಿ ಇದು ಭಾರತದ ಅರ್ಥವ್ಯವಸ್ಥೆಗೆ, ಆರ್ ಬಿ ಐಗೆ ಹಾಗೂ ಸರಕಾರಕ್ಕೆ ಒಳ್ಳೆಯದಲ್ಲ ಎಂದಿದ್ದರು. ಅವರು ಕನಿಷ್ಠ ಮುಂದಿನ ಜುಲೈ ತನಕ, ಅಂದರೆ ಹೊಸ ಸರಕಾರ ರಚನೆಯಾಗುವ ತನಕ ಅಧಿಕಾರದಲ್ಲಿರಬೇಕು, ಪ್ರಧಾನಿ ಅವರಿಗೆ ಕರೆ ಕಳುಹಿಸಿ ಅವರ ರಾಜೀನಾಮೆಗೆ ಕಾರಣ ತಿಳಿದು ಸಮಾಜದ ಹಿತದೃಷ್ಟಿಯಿಂದ ಹುದ್ದೆ ತೊರೆಯದಂತೆ ಕೇಳಿಕೊಳ್ಳಬೇಕು'' ಎಂದು ಸ್ವಾಮಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News