ಫೇಸ್‌ಬುಕ್ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆ: ಕಟ್ಟಡಗಳ ತೆರವು

Update: 2018-12-12 16:07 GMT

ಕ್ಯಾಲಿಫೋರ್ನಿಯ, ಡಿ. 12: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಕ್ಯಾಲಿಫೋರ್ನಿಯದ ಮೆನ್ಲೊ ಪಾರ್ಕ್‌ನಲ್ಲಿರುವ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ, ಹಲವು ಕಟ್ಟಡಗಳನ್ನು ತೆರವುಗೊಳಿಸಲಾಯಿತು ಎಂದು ಕಂಪೆನಿಯ ವಕ್ತಾರರೊಬ್ಬರು ಮಂಗಳವಾರ ತಿಳಿಸಿದರು.

ಬಳಿಕ, ಇದು ಹುಸಿ ಬೆದರಿಕೆ ಎನ್ನುವುದು ಸಾಬೀತಾಯಿತು.

ಎಲ್ಲರೂ ಸುರಕ್ಷಿತವಾಗಿದ್ದಾರೆ ಹಾಗೂ ಈ ಘಟನೆ ಬಗ್ಗೆ ಕಂಪೆನಿ ತನಿಖೆ ನಡೆಸುತ್ತಿದೆ ಎಂದು ಅವರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

ಜೆಫರ್‌ಸನ್ ಡ್ರೈವ್‌ನಲ್ಲಿರುವ ಕಟ್ಟಡವೊಂದನ್ನು ತೆರವುಗೊಳಿಸಲಾಗಿದೆ ಹಾಗೂ ಬಾಂಬ್ ನಿಗ್ರಹ ಘಟಕಗಳು ತಪಾಸಣೆ ನಡೆಸಿದವು ಎಂದು ಮೆನ್ಲೊ ಪಾರ್ಕ್ ಪೊಲೀಸ್ ಇಲಾಖೆ ಹೇಳಿದೆ.

ಕಟ್ಟಡ ಸುರಕ್ಷಿತವಾಗಿದೆ, ಯಾವುದೇ ಬೆದರಿಕೆಯಿಲ್ಲ ಎಂದು ಅಂತಿಮವಾಗಿ ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News