ಅಶ್ವಿನ್, ಶಾ, ರೋಹಿತ್ ಅಲಭ್ಯ

Update: 2018-12-13 18:43 GMT

ಪರ್ತ್, ಡಿ.13: ಟೀಮ್ ಇಂಡಿಯಾಕ್ಕೆ ಎರಡನೇ ಟೆಸ್ಟ್ ಆರಂಭಕ್ಕೆ ಮೊದಲೇ ತೀವ್ರ ಹಿನ್ನಡೆಯಾಗಿದೆ. ತಂಡದ ಸದಸ್ಯರಾದ ಆರ್.ಅಶ್ವಿನ್, ರೋಹಿತ್ ಶರ್ಮಾ ಹಾಗೂ ಪೃಥ್ವಿ ಶಾ ಗಾಯದ ಸಮಸ್ಯೆಯಿಂದಾಗಿ ಆಡುವ 11ರ ಬಳಗದಿಂದ ಹೊರಗುಳಿದಿದ್ದಾರೆ.

ಅಶ್ವಿನ್ ಮೊದಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನದಿಂದ ತಂಡದ ಗೆಲುವಿಗೆ ನೆರವಾಗಿದ್ದರು. ಆದರೆ, ರೋಹಿತ್ ಶರ್ಮಾ ತನಗೆ ಲಭಿಸಿದ್ದ ಅವಕಾಶ ಬಳಸಿಕೊಳ್ಳಲು ವಿಫಲರಾಗಿದ್ದರು. ಶಾ ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ. 19ರ ಹರೆಯದ ಶಾ ಸಿಡ್ನಿಯಲ್ಲಿ ನಡೆದ ಕ್ರಿಕೆಟ್ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸದ ಪಂದ್ಯದ ವೇಳೆಯೇ ಡೀಪ್ ಮಿಡ್-ವಿಕೆಟ್ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಕ್ಯಾಚ್ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾಗ ಮೊಣಕಾಲುನೋವಿಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News