ಐರ್‌ಲ್ಯಾಂಡ್: ಗರ್ಭಪಾತಕ್ಕೆ ಅನುಮತಿ ನೀಡುವ ಮಸೂದೆಗೆ ಅಂಗೀಕಾರ

Update: 2018-12-14 17:38 GMT

ಡಬ್ಲಿನ್, ಡಿ. 14: ಐರ್‌ಲ್ಯಾಂಡ್ ಸಂಸತ್ತು ಗುರುವಾರ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಅಂಗೀಕರಿಸಿದೆ. ಈ ಬೆಳವಣಿಗೆಯನ್ನು ಪ್ರಧಾನಿ ಲಿಯೊ ವರಾದ್‌ಕರ್ ‘ಐತಿಹಾಸಿಕ ಕ್ಷಣ’ ಎಂಬುದಾಗಿ ಬಣ್ಣಿಸಿದ್ದಾರೆ.

12 ವಾರಗಳವರೆಗಿನ ಗರ್ಭವನ್ನು ಕೊನೆಗೊಳಿಸಬಹುದು ಎಂದು ಮಸೂದೆ ಹೇಳುತ್ತದೆ.

ಈ ವರ್ಷದ ಆರಂಭದಲ್ಲಿ ಈ ಬಗ್ಗೆ ಜನಮತಗಣನೆ ನಡೆಸಲಾಗಿತ್ತು ಹಾಗೂ ಜನರು ಗರ್ಭಪಾತದ ಪರವಾಗಿ ಮತ ಚಲಾಯಿಸಿದ್ದರು.

ಕೆಲವು ವರ್ಷಗಳ ಹಿಂದೆ ಐರ್‌ಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ವೈದ್ಯೆ ಸವಿತಾ ಹಾಲಪ್ಪನವರ್ ಗರ್ಭಪಾತ ಸಾಧ್ಯವಾಗದೆ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ. ಅವರ ಗರ್ಭದಲ್ಲೇ ಭ್ರೂಣ ಸತ್ತಿದ್ದರೂ, ವೈದ್ಯರು ಅದನ್ನು ತೆಗೆಯಲು ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿದ್ದರು. ಬಳಿಕ, ನಂಜು ಏರಿ ಅವರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News