ಮಹಿಂದ ರಾಜಪಕ್ಸ ಇಂದು ರಾಜೀನಾಮೆ?

Update: 2018-12-15 06:46 GMT

ಕೊಲಂಬೊ, ಡಿ. 14: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರಿಂದ ಪ್ರಧಾನಿಯಾಗಿ ನೇಮಕಗೊಂಡಿರುವ ಮಹಿಂದ ರಾಜಪಕ್ಸ ಶನಿವಾರ ರಾಜೀನಾಮೆ ನೀಡಲಿದ್ದಾರೆ ಎಂದು ಅವರ ಮಗ ನಮಲ್ ರಾಜಪಕ್ಸರನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.

‘ದೇಶದ ಸ್ಥಿರತೆಯನ್ನು ಕಾಪಾಡುವ ದೃಷ್ಟಿಯಿಂದ’ ಅವರು ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ನಮಲ್ ಹೇಳಿದರು.

ಪ್ರಧಾನಿ ಹುದ್ದೆಯ ಅಧಿಕಾರಗಳನ್ನು ರಾಜಪಕ್ಸ ಚಲಾಯಿಸಬಾರದು ಎಂಬುದಾಗಿ ಶ್ರೀಲಂಕಾ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಇದಕ್ಕೂ ಒಂದು ದಿನ ಮೊದಲು ಇನ್ನೊಂದು ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಸಂಸತ್ತನ್ನು ವಿಸರ್ಜಿಸಿರುವುದು ಕಾನೂನುಬಾಹಿರ ಎಂದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಅಧ್ಯಕ್ಷರ ಅತ್ಯಂತ ವಿವಾದಾಸ್ಪದ ನಿರ್ಧಾರಗಳು ಹಿಂದೂ ಮಹಾಸಾಗರ ದ್ವೀಪ ರಾಷ್ಟ್ರವನ್ನು ಅಭೂತಪೂರ್ವ ಸಾಂವಿಧಾನಿಕ ಬಿಕ್ಕಟ್ಟಿನ ಅಂಚಿಗೆ ತಂದು ನಿಲ್ಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News