ಎರಡನೇ ಟೆಸ್ಟ್: ಆಸ್ಟ್ರೇಲಿಯ 326 ರನ್‌ಗೆ ಆಲೌಟ್

Update: 2018-12-15 04:32 GMT

ಪತ್, ಡಿ.15: ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡ ಮೊದಲ ಇನಿಂಗ್ಸ್‌ನಲ್ಲಿ 326 ರನ್ ಗಳಿಸಿ ಆಲೌಟಾಗಿದೆ.

ಎರಡನೇ ದಿನವಾದ ಶನಿವಾರ 6 ವಿಕೆಟ್‌ಗಳ ನಷ್ಟಕ್ಕೆ 277 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ 108.3 ಓವರ್‌ಗಳಲ್ಲಿ 326 ರನ್‌ಗೆ ಆಲೌಟಾಯಿತು.

16 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ನಾಯಕ ಟಿಮ್ ಪೈನ್ ನಿನ್ನೆಯ ಮೊತ್ತಕ್ಕೆ ಕೇವಲ 22 ರನ್ ಸೇರಿಸಿ ಬುಮ್ರಾ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.

ಪೈನ್ ಹಾಗೂ ಕಮಿನ್ಸ್ 7ನೇ ವಿಕೆಟ್‌ಗೆ 59 ರನ್ ಜೊತೆಯಾಟ ನಡೆಸಿದರು. ಉಮೇಶ್ ಯಾದವ್ ಅವರು ಕಮಿನ್ಸ್(19)ವಿಕೆಟ್ ಉರುಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು.

ನಿನ್ನೆ ಎರಡು ವಿಕೆಟ್ ಪಡೆದಿದ್ದ ವೇಗದ ಬೌಲರ್ ಇಶಾಂತ್ ಶರ್ಮಾ ಇಂದು ಇನ್ನೆರರಡು ವಿಕೆಟ್‌ಗಳನ್ನು ಪಡೆಯುವುದರೊಂದಿಗೆ 41 ರನ್‌ಗೆ 4 ವಿಕೆಟ್ ಪಡೆದರು. ಹ್ಯಾಂಡ್ಸ್‌ಕಾಂಬ್ ವಿಕೆಟ್ ಉರುಳಿಸುವ ಮೂಲಕ ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ಗೆ ತೆರೆ ಎಳೆದರು.

ಭಾರತ ಪರ ಬುಮ್ರಾ(2-53), ಉಮೇಶ್ ಯಾದವ್(2-78) ಹಾಗೂ ಹನುಮ ವಿಹಾರಿ(2-53) ತಲಾ 2 ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News