ನ್ಯಾಯಾಲಯದ ಅನುಮತಿಯ ಬಳಿಕ ಅಸಾರಾಂ ಕುರಿತ ಪುಸ್ತಕ ಬಿಡುಗಡೆ

Update: 2018-12-16 16:36 GMT

ಹೊಸದಿಲ್ಲಿ, ಡಿ.16: ಸ್ವಘೋಷಿತ ದೇವಮಾನವ ಅಸಾರಾಂ ಕುರಿತು ಪುಸ್ತಕದ ಪ್ರಕಟಣೆಯನ್ನು ತಡೆಹಿಡಿಯಲು ಚಂಡಿಗಡದ ನ್ಯಾಯಾಲಯವು ನಿರಾಕರಿಸಿದ ಬಳಿಕ ಅದನ್ನು ಬಿಡುಗಡೆಗೊಳಿಸಲಾಗಿದೆ.

  ಉಶಿನುರ್ ಮಜುಮ್ದಾರ್ ರಚಿಸಿರುವ ‘ಗಾಡ್ ಆಫ್ ಸಿನ್:ದಿ ಕಲ್ಟ್,ದಿ ಕ್ಲೌಟ್ ಆ್ಯಂಡ್ ಡೌನ್‌ಫಾಲ್ ಆಫ್ ಆಸಾರಾಂ ಬಾಪು’ ಪುಸ್ತಕಕ್ಕೆ ವಿರೋಧ ವ್ಯಕ್ತವಾಗಿದ್ದು,ಅದರ ಪ್ರಕಾಶನದ ವಿರುದ್ಧ ಕಾಯಂ ತಡೆಯಾಜ್ಞೆಯನ್ನು ಕೋರಿ ನ್ಯಾಯಾಲಯದ ಮೆಟ್ಟಿಲನ್ನೇರಲಾಗಿತ್ತು.

ನ್ಯಾಯಾಲಯದ ಆದೇಶವನ್ನು ಪ್ರಶಂಸಿಸಿರುವ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ,ಪುಸ್ತಕವನ್ನು ಎಲ್ಲ ಓದುಗರಿಗೆ ಲಭ್ಯವಾಗಿಸಲಾಗುವುದು ಎಂದು ಹೇಳಿದೆ.

ಆಧ್ಯಾತ್ಮಿಕ ದೈವತ್ವದೆಡೆಗೆ ಆಸಾರಾಂ ಪಯಣ,ಆತನ ಪತನ ಮತ್ತು ಆತನನ್ನು ನ್ಯಾಯದ ಕಟಕಟೆಗೆ ತರಲು ಪಟ್ಟ ಶ್ರಮ ಇವುಗಳ ಕಥನವನ್ನು ಈ ಪುಸ್ತಕವು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News