ಇಂಡೊನೇಶ್ಯದಲ್ಲಿ ಜ್ವಾಲಾಮುಖಿ ಸ್ಫೋಟ

Update: 2018-12-16 16:53 GMT

ಜಕಾರ್ತ,ಡಿ.16: ಇಂಡೊನೇಶ್ಯದ ಉತ್ತರ ಸುಲಾವೆಸಿ ಪ್ರಾಂತದ ಪರ್ವತವೊಂದರಲ್ಲಿ ರವಿವಾರ ಜ್ವಾಲಾಮುಖಿ ಸ್ಫೋಟಿಸಿದ್ದು, 7.5 ಕಿ.ಮೀ.ನಷ್ಟು ಆಕಾಶದೆತ್ತರಕ್ಕೆ ಬೂದಿಯನ್ನು ಕಾರಿರುವುದಾಗಿ, ವಿಪತ್ತು ನಿರ್ವ ಹಣಾ ಏಜೆನ್ಸಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸೊಪುಟನ್ ಪರ್ವತದಲ್ಲಿ ಜ್ವಾಲಾಮುಖಿಯು ಮುಂಜಾನೆ 7:43 ಹಾಗೂ ಆನಂತರ ಬೆಳಗ್ಗೆ 8:57 ನಿಮಿಷಕ್ಕೆ ಸ್ಫೋಟಿಸಿದೆಯೆಂದು ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರರು ಕ್ಸಿನುವಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಜ್ವಾಲಾಮುಖಿ ಸ್ಫೋಟಿಸಿದ ಸಂದರ್ಭ ಪ್ರದೇಶದಲ್ಲಿ ಲಘು ಭೂಕಂಪನದ ಅನುಭವವಾಗಿದೆಯೆಂದು ಮೂಲಗಳು ತಿಳಿಸಿವೆ.

 ಜ್ವಾಲಾಮುಖಿ ಸ್ಪೋಟಿಸಿದ ಸೊಪುಟನ್ ಪರ್ವತ ಪ್ರದೇಶದ 4 ಕಿ.ಮೀ. ವ್ಯಾಪ್ತಿಯಲ್ಲಿ ಮಾನವಚಟುವಟಿಕೆಗಳನ್ನು ನಿಷೇಧಿಸಲಾಗಿದೆಯೆಂದು ವಕ್ತಾರರು ತಿಳಿಸಿದ್ದಾರೆ. ಸೊಪುಟನ್ ಪರ್ವತವು ಇಂಡೊನೇಶ್ಯದಲ್ಲಿ ಜ್ವಾಲಾಮುಖಿ ಸಕ್ರಿಯವಾಗಿರುವ 129 ಪರ್ವತಗಳಲ್ಲೊಂದಾಗಿದೆ. ಈ ಪರ್ವತವು,ಭೂಕಂಪಕ್ಕೆ ಸುಲಭವಾಗಿ ತುತ್ತಾಗುವಂತಹ ‘ಪೆಸಿಫಿಕ್ ಅಗ್ನಿ ವರ್ತುಲ’ ಎಂದು ಕರೆಯಲ್ಪಡುವ ವಲಯದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News