15 ಉಗ್ರರಿಗೆ ಮರಣದಂಡನೆ ದೃಢಪಡಿಸಿದ ಪಾಕ್ ಸೇನಾ ವರಿಷ್ಠ ಬಾಜ್ವಾ

Update: 2018-12-16 17:04 GMT

ಇಸ್ಲಾಮಾಬಾದ್,ಡಿ.16: ನಾಗರಿಕರ ಹತ್ಯಾಕಾಂಡದಲ್ಲಿ ಶಾಮೀಲಾದ ಹಾಗೂ 2016ರಲ್ಲಿ ಪೇಶಾವರದ ಕ್ರಿಶ್ಚಿಯನ್ ಕಾಲನಿಯಲ್ಲಿ ನಡೆದ ಆತ್ಮಹತ್ಯಾ ದಾಳಿಗೆ ನೆರವಾದ ಆರೋಪ ಎದುರಿಸುತ್ತಿದ್ದ 15 ಮಂದಿ ಕಟ್ಟಾ ಭಯೋತ್ಪಾದಕರಿಗೆ ಮರಣದಂಡನೆ ವಿಧಿಸಿರುವುದನ್ನು ಪಾಕ್ ಸೇನಾ ಪಡೆಯ ವರಿಷ್ಠ ಜನರಲ್ ಖಮರ್ ಜಾವೇದ್ ಬಾಜ್ವಾ ರವಿವಾರ ದೃಢಪಡಿಸಿದ್ದಾರೆ.

‘‘ಭಯೋತ್ಪಾದನೆಗೆ ಸಂಬಂಧಿಸಿದ ಹೇಯ ಅಪರಾಧಗಳಲ್ಲಿ ಶಾಮೀಲಾದ 15 ಮಂದಿ ಕಟ್ಟಾ ಉಗ್ರರಿಗೆ ಮರಣದಂಡನೆ ವಿಧಿಸಿರುವುದನ್ನು ಜನರಲ್ ಬಾಜ್ವಾ ದೃಢಪಡಿಸಿದ್ದಾರೆಂದು” ಪಾಕ್ ಸೇನೆಯ ಮಾಧ್ಯಮ ದಳವಾದ ಐಎಸ್‌ಪಿಆರ್ ಬಿಡುಗಡೆಗೊಳಿಸಿದ ಹೇಳಿಕೆಯೊಂದು ತಿಳಿಸಿ

ಸಶಸ್ತ್ರಪಡೆಗಳು/ಕಾನೂನು ಜಾರಿ ಸಂಸ್ಥೆಗಳ ಮೇಲೆ ದಾಳಿ,,ಪೇಶಾವರ ಸಮೀಪದ ಕ್ರೈಸ್ತ ಕಾಲನಿಯಲ್ಲಿ ದಾಳಿ ನಡೆಸಲು ಆತ್ಮಹತ್ಯಾ ಬಾಂಬರ್‌ಗಳಿಗೆ ಆಶ್ರಯ ನೀಡಿದ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ನಾಶಪಡಿಸಲು ಮತ್ತು ಅಮಾಯಕ ನಾಗರಿಕರನ್ನು ಹತ್ಯೆಗೈದ ಆರೋಪಗಳಿಗಾಗಿ ಈ ಭಯೋತ್ಪಾದರಿಗೆ ಮರಣದಂಡನೆ ವಿಧಿಸಲಾಗಿದೆಯೆಂದು ಬಾಜ್ವಾ ಹೇಳಿದ್ದಾರೆ.

 2016ರ ಸೆಪ್ಟೆಂಬರ್‌ನಲ್ಲಿ ನಾಲ್ವರು ಆತ್ಮಹತ್ಯಾ ಬಾಂಬರ್‌ಗಳು ಪೇಶಾವರದ ಕ್ರೈಸ್ತ ಕಾಲನಿಯ ಮೇಲೆ ದಾಳಿ ನಡೆಸಿದ್ದರು. ಆಗ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪಾಕ್ ಭದ್ರತಾಪಡೆಗಳು, ಎಲ್ಲಾ ನಾಲ್ವರು ಬಾಂಬರ್‌ಗಳನ್ನು ಹತ್ಯೆಗೈದಿದ್ದವು. ಈ ದಾಳಿಯ ಹೊಣೆಯನ್ನು ತಾಲಿಬಾನ್‌ನ ಒಂದು ಬಣವಾದ ಜಮಾತುರ್ ಅಹ್ರಾರ್ ವಹಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News