3.2 ಟನ್ ಆನೆದಂತ ವಶ

Update: 2018-12-16 17:19 GMT

ಪೆನೊಮ್‌ಪೆನ್ಹ್, ಡಿ.16: ಬೃಹತ್ ಆನೆದಂತ ಕಳ್ಳಸಾಗಣೆ ಜಾಲವನ್ನು ಕಾಂಬೊಡಿಯಾ ಕಸ್ಟಮ್ಸ್ ಇಲಾಖೆ ರವಿವಾರ ಭೇದಿಸಿದೆ. ಆಫ್ರಿಕದ ರಾಷ್ಟ್ರವಾದ ಮೊಜಾಂಬಿಕ್‌ನಿಂದ ಸ್ಟೋರೇಜ್ ಕಂಟೈನರ್ ಒಂದರಲ್ಲಿ ಬಚ್ಚಿಡಲಾಗಿದ್ದ 3.2 ಟನ್ ಆನೆ ದಂತಗಳನ್ನು ಕಾಂಬೊಡಿಯಾದಲ್ಲಿ ವಶಪಡಿಸಿಕೊಂಡಿರುವುದಾಗಿ, ಕಸ್ಟಮ್ಸ್ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

ಈ ದಂತವನ್ನು ಮೊಝಾಂಬಿಕ್‌ನಿಂದ ಕಳುಹಿಸಲಾಗಿದ್ದು, ಕಳೆದ ವರ್ಷ ಅದು ಕಾಂಬೊಡಿಯಾದ ಬಂದರಿಗೆ ಆಗಮಿಸಿತ್ತು.ಈ ಸರಕನ್ನು ಪಡೆಯಲು ಅದರ ಅಜ್ಞಾತ ಮಾಲಕ ಆಗಮಿಸಿರದ ಕಾರಣ ಅದು ಹಲವಾರು ತಿಂಗಳುಗಳಿಂದ ಪರಿತ್ಯಕ್ತ ಸ್ಥಿತಿಯಲ್ಲಿತ್ತು.

ವಶಪಡಿಸಿಕೊಳ್ಳಲಾದ ಭಾರೀ ಸಂಖ್ಯೆಯ ಆನೆದಂತಗಳನ್ನು ಬಂದರಿನ ನೆಲದಲ್ಲಿ ಹರಡಿ ಇರಿಸಿರುವ ದೃಶ್ಯಗಳಿರುವ ಛಾಯಾಚಿತ್ರಗಳನ್ನು ಕಾಂಬೊಡಿಯಾ ಕಸ್ಟಮ್ಸ್ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ.

ಆನೆದಂತಗಳಿಗೆ ಚೀನಾ ಹಾಗೂ ವಿಯೆಟ್ನಾಂನಲ್ಲಿ ಭಾರೀ ಬೇಡಿಕೆಯಿರುವುದರಿಂದ ಕಾಂಬೊಡಿಯಾ ಮೂಲಕವಾಗಿ ಆ ದೇಶಗಳಿಗೆ ವ್ಯಾಪಕವಾಗಿ ಅವುಗಳು ಕಳ್ಳಸಾಗಣೆಯಾಗುತ್ತಿವೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News