ಗುಜರಾತ್-ಕರ್ನಾಟಕ ಪಂದ್ಯ ಡ್ರಾ

Update: 2018-12-17 18:24 GMT

ವಿನಯ್ ಬಳಗಕ್ಕೆ  3 ಅಂಕ

ಸೂರತ್, ಡಿ.17: ಗುಜರಾತ್ ದಾಂಡಿಗರು ಎರಡನೇ ಇನಿಂಗ್ಸ್‌ನಲ್ಲಿ ತೋರಿದ ಉತ್ತಮ ಪ್ರದರ್ಶನದ ಕಾರಣ ಕರ್ನಾಟಕದ ವಿರುದ್ಧ ನಡೆದ ಪಂದ್ಯವನ್ನು ಗುಜರಾತ್ ಡ್ರಾ ಮಾಡಿಕೊಂಡು ನಿಟ್ಟುಸಿರು ಬಿಟ್ಟಿದೆ. ಆದರೆ ಪ್ರಥಮ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ 3 ಅಂಕ ಗಳಿಸಿದ್ದು, ಗುಜರಾತ್ 1 ಅಂಕಕ್ಕೆ ತೃಪ್ತಿಪಟ್ಟಿದೆ,

ಇಲ್ಲಿಯ ಲಾಲ್‌ಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನವಾದ ಸೋಮವಾರ ಗುಜರಾತ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 124.ಓವರ್‌ಗಳಲ್ಲಿ 345ಕ್ಕೆ ಎಲ್ಲ ವಿಕೆಟ್ ಕಳೆದುಕೊಂಡಿತು. ಗುಜರಾತ್ ಪರ ಮನ್‌ಪ್ರೀತ್ ಜುನೇಜಾ(98) ಹಾಗೂ ರುಜುಲ್ ಭಟ್(91) ಭರ್ಜರಿ ಆಟವಾಡಿ ಶತಕವಂಚಿತಗೊಂಡರೂ ಕರ್ನಾಟಕದ ಹಿಡಿತದಲ್ಲಿದ್ದ ಪಂದ್ಯವನ್ನು ಡ್ರಾ ಕಡೆಗೆ ಎಳೆದು ತರುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರ್ಗವ್ ಮೆರಾಲ್ (74) ಅರ್ಧಶತಕ ಸಿಡಿಸಿದರು. ಕರ್ನಾಟಕದ ಪರ ಬೌಲರ್‌ಗಳಾದ ಕೆ.ಗೌತಮ್ ಹಾಗೂ ರೋನಿತ್ ಮೋರೆ ತಲಾ 4 ವಿಕೆಟ್ ಪಡೆದರು.

ಗೆಲುವಿಗೆ 173 ರನ್‌ಗಳ ಸವಾಲು ಪಡೆದಿದ್ದ ಕರ್ನಾಟಕಕ್ಕೆ ಸಮಯ ಸಾಕಾಗಲಿಲ್ಲ. ಅಂತಿಮವಾಗಿ ತನ್ನ ಎರಡನೇ ಇನಿಂಗ್ಸ್ ನಲ್ಲಿ ಕೇವಲ 27 ಓವರ್‌ಗಳನ್ನಷ್ಟೇ ಆಡಿದ ಕರ್ನಾಟಕ 107 ರನ್ ಗಳಿಸಿತು. ಈ ಹಂತದಲ್ಲಿ ಅದು ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಮಾಯಾಂಕ್ ಅಗರ್ವಾಲ್ ಅರ್ಧಶತಕ (53) ಸಿಡಿಸಿದರೆ ಸಮರ್ಥ್ 33 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

►ಗುಜರಾತ್ ಪ್ರಥಮ ಇನಿಂಗ್ಸ್: 69.4 ಓವರ್‌ಗಳಲ್ಲಿ 216 ಆಲೌಟ್

►ಕರ್ನಾಟಕ ಪ್ರಥಮ ಇನಿಂಗ್ಸ್: 121 ಓವರ್‌ಗಳಲ್ಲಿ 389 ಆಲೌಟ್

►ಗುಜರಾತ್ ದ್ವಿತೀಯ ಇನಿಂಗ್ಸ್: 124.5 ಓವರ್‌ಗಳಲ್ಲಿ 345/10( ಜುನೇಜಾ 98, ರುಜುಲ್ ಭಟ್ 91, ಭಾರ್ಗವ್ ಮೆರಾಲ್ 74, ರೋನಿತ್ 61ಕ್ಕೆ 4, ಕೆ.ಗೌತಮ್ 80ಕ್ಕೆ 4)

►ಕರ್ನಾಟಕ ದ್ವಿತೀಯ ಇನಿಂಗ್ಸ್: 27 ಓವರ್‌ಗಳಲ್ಲಿ 4ಕ್ಕೆ 107( ಮಾಯಾಂಕ್ ಅಗರ್ವಾಲ್ 53, ಸಮರ್ಥ್ 33, ಅಕ್ಷರ್ ಪಟೇಲ್ 45ಕ್ಕೆ 3)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News