“ಮೇರಾ ಭಾರತ್ ಮಹಾನ್”: ಸುಷ್ಮಾ ಸ್ವರಾಜ್ ರನ್ನು ಆಲಂಗಿಸಿ ಗದ್ಗದಿತರಾದ ತಾಯಿ ಫೌಝಿಯಾ

Update: 2018-12-19 09:25 GMT

ಹೊಸದಿಲ್ಲಿ, ಡಿ.19: ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾದ ನಂತರ ಭಾರತೀಯ ಪ್ರಜೆ ಹಾಮಿದ್ ಅನ್ಸಾರಿ ಮತ್ತವರ ತಾಯಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರನ್ನು ಭೇಟಿಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕ್ ಜೈಲಿನಲ್ಲಿ 6 ವರ್ಷಗಳನ್ನು ಕಳೆದ ಅನ್ಸಾರಿ ನಿನ್ನೆ ಪಂಜಾಬ್ ನ ಅಟ್ಟಾರಿ-ವಾಘಾ ಗಡಿ ಮೂಲಕ ತಾಯ್ನಾಡಿಗೆ ಮರಳಿದರು. “ಮೇರಾ ಭಾರತ್ ಮಹಾನ್, ಮೇರಿ ಮೇಡಂ ಮಹಾನ್. ನಿಮ್ಮಿಂದಲೇ ಎಲ್ಲವೂ ಸಾಧ್ಯವಾಯಿತು” ಎಂದು ಸುಷ್ಮಾರನ್ನು ಆಲಂಗಿಸಿದ ಅನ್ಸಾರಿಯವರ ತಾಯಿ ಫೌಝಿಯಾ ಹೇಳಿದರು.

ಇಬ್ಬರನ್ನೂ ಆಲಂಗಿಸಿದ ಸುಷ್ಮಾ ಸ್ವರಾಜ್ ಕೆಲಹೊತ್ತು ಇಬ್ಬರ ಜೊತೆಗೂ ಮಾತುಕತೆ ನಡೆಸಿದರು. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳನ್ನು ಭೇಟಿಯಾಗಲು 2012 ನವೆಂಬರ್ 12ರಂದು ಅನ್ಸಾರಿ ಪಾಕ್ ಗೆ ಪ್ರವೇಶಿಸಿದ್ದರು. ಅಲ್ಲಿ ಅವರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News