ಬಳಕೆದಾರರ ಮೆಸೇಜ್, ಮಾಹಿತಿಗಳನ್ನು ಹಂಚುತ್ತಿರುವ ಫೇಸ್‌ ಬುಕ್: ಆರೋಪ

Update: 2018-12-19 17:03 GMT

ಸಾನ್‌ಫ್ರಾನ್ಸಿಸ್ಕೊ, ಡಿ. 18: ಸಾಮಾಜಿಕ ಜಾಲತಾಣ ಫೇಸ್‌ ಬುಕ್, ತನ್ನ ಬಳಕೆದಾರರು ಅವರ ಸ್ನೇಹಿತರಿಗೆ ಕಳುಹಿಸಿದ ವೈಯಕ್ತಿಕ ಸಂದೇಶಗಳು ಮತ್ತು ಸಂಪರ್ಕ ಮಾಹಿತಿಗಳು ಸೇರಿದಂತೆ ವೈಯಕ್ತಿಕ ದತ್ತಾಂಶವನ್ನು ಮೈಕ್ರೋಸಾಫ್ಟ್, ಅಮೆಝಾನ್ ಮುಂತಾದ ಜಗತ್ತಿನ ಅತಿ ದೊಡ್ಡ ತಂತ್ರಜ್ಞಾನ ಕಂಪೆನಿಗಳೊಂದಿಗೆ ಹಂಚಿಕೊಳ್ಳುತ್ತಿದೆ ಎಂದು ಸೋರಿಕೆಯಾದ ಆಂತರಿಕ ದಾಖಲೆಗಳು ಹೇಳುತ್ತವೆ.

ಫೇಸ್‌ಬುಕ್ ಸಾರ್ವಜನಿಕವಾಗಿ ಒಪ್ಪಿಕೊಂಡ ವಿಷಯಗಳಲ್ಲಿ ಈ ಅಂಶಗಳಿಲ್ಲ.

ತನ್ನ ಬಳಕೆದಾರರ ಖಾಸಗಿ ಸಂದೇಶಗಳನ್ನು ಓದಲು ಫೇಸ್‌ಬುಕ್ ನೆಟ್‌ಫ್ಲಿಕ್ಸ್ ಮತ್ತು ಸ್ಪೋಟಿಫೈಗಳಿಗೆ ಅವಕಾಶ ಮಾಡಿಕೊಟ್ಟಿದೆ. ಫೇಸ್‌ಬುಕ್ ಬಳಕೆದಾರರ ಸ್ನೇಹಿತರ ಹೆಸರುಗಳನ್ನು ಅನುಮತಿಯಿಲ್ಲದೆ ನೋಡಲು ಮೈಕ್ರೋಸಾಫ್ಟ್‌ನ ಸರ್ಚ್ ಇಂಜಿನ್ ‘ಬಿಂಗ್’ಗೆ ಅದು ಅವಕಾಶ ನೀಡಿದೆ.

ಅನುಮತಿಯಿಲ್ಲದೆ ಮಾಹಿತಿ ಹಂಚಿಕೆಯಿಲ್ಲ: ಫೇಸ್‌ಬುಕ್

ಬಳಕೆದಾರರ ದತ್ತಾಂಶವನ್ನು ಅವರ ಅನುಮತಿಯಿಲ್ಲದೆ ಪಡೆಯಲು ದೈತ್ಯ ತಂತ್ರಜ್ಞಾನ ಕಂಪೆನಿಗಳಿಗೆ ಅವಕಾಶ ನೀಡಲಾಗಿಲ್ಲ ಎಂದು ಫೇಸ್‌ಬುಕ್ ಬುಧವಾರ ಹೇಳಿದೆ.

ನೆಟ್‌ಫ್ಲಿಕ್ಸ್ ಮತ್ತು ಸ್ಪೋಟಿಫೈ ಮುಂತಾದ ತನ್ನ ಇಂಟಗ್ರೇಶನ್ ಭಾಗೀದಾರರು ಇದಕ್ಕಾಗಿ ಬಳಕೆದಾರರಿಂದ ಅನಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ಫೇಸ್‌ಬುಕ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News