×
Ad

ಅಮೆರಿಕ ಮಧ್ಯಪ್ರಾಚ್ಯದ ಪೊಲೀಸ್ ಅಲ್ಲ: ಟ್ರಂಪ್

Update: 2018-12-21 22:54 IST

ಜಿದ್ದಾ, ಡಿ. 21: ಅಮೆರಿಕವು ಮಧ್ಯಪ್ರಾಚ್ಯದಲ್ಲಿ ಪೊಲೀಸ್ ಕೆಲಸ ಮಾಡುವುದಿಲ್ಲ, ಐಸಿಸ್ ಭಯೋತ್ಪಾದಕರ ವಿರುದ್ಧ ಹೋರಾಡುವ ಹೆಚ್ಚಿನ ಪಾತ್ರವನ್ನು ವಹಿಸಿಕೊಳ್ಳಲು ರಶ್ಯ, ಇರಾನ್ ಮತ್ತು ಸಿರಿಯದ ಅಸಾದ್ ಸರಕಾರಕ್ಕೆ ಇದು ಸಕಾಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಉತ್ತರ ಸಿರಿಯದಲ್ಲಿರುವ ಅಮೆರಿಕದ 2,000 ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರಕ್ಕೆ ಅವರು ಈ ರೀತಿಯ ವಿವರಣೆಯನ್ನು ನೀಡಿದ್ದಾರೆ.

ಉತ್ತರ ಸಿರಿಯದಲ್ಲಿ ಅಮೆರಿಕ ಸೈನಿಕರು ಕುರ್ದಿಶ್ ಬಂಡುಕೋರ ಮಿತ್ರರೊಂದಿಗೆ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದಾರೆ.

‘‘ನಾವು ಐಸಿಸ್ ವಿರುದ್ಧ ಗೆಲುವು ಸಾಧಿಸಿದ್ದೇವೆ. ನಾವು ಅವರನ್ನು ಸೋಲಿಸಿದ್ದೇವೆ. ನಾವು ಅವರನ್ನು ಕೆಟ್ಟದಾಗಿ ಸೋಲಿಸಿದ್ದೇವೆ. ನಾವು ಜಮೀನನ್ನು ಮರುವಶಪಡಿಸಿಕೊಂಡಿದ್ದೇವೆ. ಈಗ ನಮ್ಮ ಸೈನಿಕರು ಮನೆಗೆ ವಾಪಸಾಗಲು ಸಕಾಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News