×
Ad

ಮೋದಿ ಹವಾ ಕುಸಿಯುತ್ತಿದೆ, ಬಿಜೆಪಿಯ ವಿಭಜನವಾದ ತಿರುಗೇಟಾಗಿದೆ: ಎನ್‌ಡಿಎ ಮಿತ್ರಪಕ್ಷದ ಸಂಸದ

Update: 2018-12-25 23:02 IST

ಗ್ಯಾಂಗ್ಟಕ್,ಡಿ.25: ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕುಸಿಯುತ್ತಿದ್ದು, ಇದು 2019ರ ಲೋಕಸಭೆ ಚುನಾವಣೆಯ ನಂತರ ಮತ್ತೆ ಅಧಿಕಾರಕ್ಕೇರುವ ಬಿಜೆಪಿ ಕನಸಿಗೆ ತೀವ್ರ ಹಿನ್ನಡೆಯುಂಟು ಮಾಡಲಿದೆ. ಅದರಲ್ಲೂ ವಿಪಕ್ಷಗಳು ಮಹಾಮೈತ್ರಿ ಹೆಸರಲ್ಲಿ ಒಂದಾದರೆ ಬಿಜೆಪಿ ಸಮಸ್ಯೆಗೆ ಸಿಲುಕಲಿದೆ ಎಂದು ಸಿಕ್ಕಿಂನ ಏಕಮಾತ್ರ ಸಂಸದ ಪಿ.ಡಿ ರಾಯ್ ತಿಳಿಸಿದ್ದಾರೆ.

ರಾಯ್ ಅವರ ಸಿಕ್ಕಿಂ ಪ್ರಜಾಸತಾತ್ಮಕ ರಂಗ (ಎಸ್‌ಡಿಎಫ್) ಆಡಳಿತಾರೂಡ ಎನ್‌ಡಿಎಯ ಮಿತ್ರಪಕ್ಷವಾಗಿದೆ. “ಪ್ರಾದೇಶಿಕ ಪಕ್ಷವಾಗಿ ನಾವು ಖಂಡಿತವಾಗಿಯೂ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ. ಆದರೆ ರಾಷ್ಟ್ರೀಯವಾಗಿ ನೋಡಿದಾಗ ಮೋದಿಯವರ ಜನಪ್ರಿಯತೆಯು ಕುಸಿದಿರುವಂತೆ ನನಗನಿಸುತ್ತದೆ. ಬಿಜೆಪಿಯ ವಿಭಜನವಾದ ಈಗಾಗಲೇ ಪಕ್ಷಕ್ಕೆ ತಿರುಗೇಟಾಗಿ ಪರಿಣಮಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ” ಎಂದು ರಾಯ್ ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

“ಸಂಸತ್ ಕಲಾಪಗಳು ನಡೆಯದಿರುವುದು ನಮ್ಮಂಥ ಸಣ್ಣ ಪಕ್ಷಗಳಿಗೆ ಸಮಸ್ಯೆನ್ನುಂಟು ಮಾಡುತ್ತಿದ್ದು, ದೊಡ್ಡ ಪಕ್ಷಗಳ ಅಬ್ಬರದ ನಡುವೆ ನಮ್ಮ ಆಲಿಕೆಯ ಹಕ್ಕನ್ನು ಕಸಿಯಲಾಗುತ್ತಿದೆ” ಎಂದು ರಾಯ್ ಆರೋಪಿಸಿದ್ದಾರೆ. ಕಾಂಗ್ರೆಸ್ ಛತ್ತೀಸ್‌ಗಡದಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ್ದರೂ ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಹಳ ಕಡಿಮೆ ಸ್ಥಾನಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮ ಪಟ್ಟರೆ ಪಕ್ಷ 2019ರ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಅವರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News