2ನೇ ಟೆಸ್ಟ್: 15 ಎಸೆತಗಳಲ್ಲಿ ಆರು ವಿಕೆಟ್ ಉರುಳಿಸಿದ ಕಿವೀಸ್ ಬೌಲರ್ ಬೌಲ್ಟ್

Update: 2018-12-27 07:03 GMT

ಕ್ರೈಸ್ಟ್‌ಚರ್ಚ್, ಡಿ.27: ನ್ಯೂಝಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಭರ್ಜರಿ ಬೌಲಿಂಗ್‌ಗೆ ತತ್ತರಿಸಿದ ಪ್ರವಾಸಿ ಶ್ರೀಲಂಕಾ ತಂಡ 2ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 104 ರನ್‌ಗೆ ಸರ್ವಪತನ ಕಂಡಿದೆ.

2ನೇ ದಿನದಾಟವಾದ ಗುರುವಾರ 4 ವಿಕೆಟ್ ನಷ್ಟಕ್ಕೆ 88 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾಕ್ಕೆ ಬೌಲ್ಟ್ ಸವಾಲಾಗಿ ಪರಿಗಣಿಸಿದರು. 15 ಎಸೆತಗಳಲ್ಲಿ ಕೇವಲ 4 ರನ್ ಬಿಟ್ಟುಕೊಟ್ಟ ಬೌಲ್ಟ್ ಆರು ವಿಕೆಟ್ ಗೊಂಚಲು ಕಬಳಿಸಿದರು. ಈ ಮೂಲಕ ನ್ಯೂಝಿಲೆಂಡ್‌ಗೆ 74 ರನ್ ಇನಿಂಗ್ಸ್ ಮುನ್ನಡೆ ಒದಗಿಸಿಕೊಟ್ಟರು.

ಶ್ರೀಲಂಕಾದ ಮಧ್ಯಮ ಹಾಗೂ ಕೆಳ ಕ್ರಮಾಂಕದ ದಾಂಡಿಗರನ್ನು ಬೇಗನೆ ಪೆವಿಲಿಯನ್‌ಗೆ ಅಟ್ಟಿದ ಬೌಲ್ಟ್ 2ನೇ ದಿನದಾಟದಲ್ಲಿ ಕೇವಲ 40 ನಿಮಿಷದೊಳಗೆ ಪ್ರವಾಸಿ ಶ್ರೀಲಂಕಾ ಎಲ್ಲ ವಿಕೆಟ್‌ಗಳನ್ನು ಕಳೆದುಕೊಳ್ಳಲು ಕಾರಣರಾದರು.

ಜೀವನಶ್ರೇಷ್ಠ ಬೌಲಿಂಗ್(6-30) ಸಂಘಟಿಸಿದ ಬೌಲ್ಟ್ ಶ್ರೀಲಂಕಾವನ್ನು ಇನ್ನಿಲ್ಲದಂತೆ ಕಾಡಿದರು. ಶ್ರೀಲಂಕಾ ಕೊನೆಯ 5 ವಿಕೆಟ್‌ಗಳನ್ನು 4 ರನ್ ಅಂತರದಲ್ಲಿ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಲಂಕಾದ ಟೆಸ್ಟ್ ಇತಿಹಾಸದಲ್ಲಿ ಕೊನೆಯ 5 ವಿಕೆಟ್‌ಗಳು ಇಷ್ಟು ಕಡಿಮೆ ಮೊತ್ತಕ್ಕೆ ಉರುಳಿದ್ದು ಇದೇ ಮೊದಲು. ನಾಲ್ವರು ಆಟಗಾರರು ಶೂನ್ಯಕ್ಕೆ ಔಟಾದಾಗ ಔಟಾಗದೆ 33 ರನ್ ಗಳಿಸಿದ್ದ  ಆ್ಯಂಜೆಲೊ ಮ್ಯಾಥ್ಯೂಸ್ ಅಸಹಾಯಕತೆಯಿಂದ ನೋಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News