ಮುಂಬೈ: ತೃತೀಯ ಲಿಂಗಿಗಳಿಂದ ಪ್ರತಿಭಟನೆ

Update: 2018-12-27 18:07 GMT

ಮುಂಬೈ, ಡಿ. 27: ತೃತೀಯ ಲಿಂಗಿ ವ್ಯಕ್ತಿಗಳ ಮಸೂದೆಯ ವಿರುದ್ಧ ಮುಂಬೈಯ ಆಝಾದ್ ಮೈದಾನದಲ್ಲಿ ತೃತೀಯ ಲಿಂಗಿ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದರು. ಲೋಕಸಭೆಯಲ್ಲಿ ಕಳೆದ ವಾರ ತೃತೀಯ ಲಿಂಗಿಗಳ ಮಸೂದೆ ಮಂಜೂರು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿರುವ ತೃತಿಯ ಲಿಂಗಿಗಳು ಮಸೂದೆ ಹಿಂದೆ ತೆಗೆಯಿರಿ ಅಥವಾ ಮರು ಪರಿಶೀಲನೆಗೆ ಕಳುಹಿಸಿ ಎಂದು ಸರಕಾರವನ್ನು ಆಗ್ರಹಿಸಿದರು.

‘‘ಸಂತಸದ ಸಂದರ್ಭಗಳಲ್ಲಿ ಜನರನ್ನು ಆಶೀರ್ವದಿಸುವ ಹಕ್ಕನ್ನು ಶ್ರೀರಾಮ ನಮಗೆ ನೀಡಿದ್ದಾನೆ. ಇದು ಭಿಕ್ಷೆ ಅಲ್ಲ. ಮಸೂದೆ ಇದನ್ನು ಅಪರಾಧೀಕರಣಗೊಳಿಸಿದೆ. ನಮಗೆ ಉದ್ಯೋಗ ನೀಡಲು ಸಾಧ್ಯವಾಗದೇ ಇದ್ದರೆ, ನಮ್ಮ ಜೀವನಾಧಾರವನ್ನು ಕಸಿದುಕೊಳ್ಳಬೇಡಿ. ಈ ಮಸೂದೆ ರದ್ದುಗೊಳಿಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸುತ್ತೇವೆ’’ ಎಂದು ತೃತೀಯ ಲಿಂಗಿ ಸಮುದಾಯದ ಸದಸ್ಯೆ ವಿಕ್ಕಿ ಶಿಂದೆ ತಿಳಿಸಿದ್ದಾರೆ. ಈ ಹಿಂದೆ ಡಿಸೆಂಬರ್ 20ರಂದು ಕರ್ನಾಟಕದ ಕಲುಬುರ್ಗಿಯ ಡಿಸಿ ಕಚೇರಿ ಮುಂದೆ ಮಸೂದೆ ವಿರೋಧಿಸಿ ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News