ಆಸ್ಟ್ರೇಲಿಯನ್ ಓಪನ್: ಫೆಡರರ್‌ಗೆ ಹ್ಯಾಟ್ರಿಕ್ ವಿಶ್ವಾಸ

Update: 2018-12-27 19:09 GMT

ಪರ್ತ್, ಡಿ.27: ಮತ್ತೊಂದು ಯಶಸ್ವಿ ವರ್ಷಕ್ಕೆ ತಾನು ಸಿದ್ಧನಾಗಿದ್ದೇನೆ ಎಂದು ಸ್ವಿಸ್ ಟೆನಿಸ್ ತಾರೆ ರೋಜರ್ ಫೆಡರರ್ ಮುಂಬರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯನ್ನು ಉಲ್ಲೇಖಿಸಿ ಗುರುವಾರ ಹೇಳಿಕೆ ನೀಡಿದ್ದಾರೆ.

ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಫೆಡರರ್, ಮೆಲ್ಬೋರ್ನ್‌ನಲ್ಲಿ ಆರಂಭವಾಗುವ ವರ್ಷದ ಮೊದಲ ಗ್ರಾನ್‌ಸ್ಲಾಮ್‌ನ್ನು ಜಯಿಸಲು ಉತ್ಸುಕರಾಗಿದ್ದಾರೆ. 2017 ಹಾಗೂ 2018ರಲ್ಲಿ ಸತತ ಎರಡು ಬಾರಿ ಈ ಟೂರ್ನಿಯ ಚಾಂಪಿಯನ್ ಆಗಿರುವ ಅವರು, ಮೂರನೇ ಬಾರಿ ತಮ್ಮ ಕರಾಮತ್ತು ತೋರಲು ಸಿದ್ಧವಾಗಿದ್ದಾರೆ.

2012ರ ನಂತರ 5 ವರ್ಷಗಳ ಕಾಲ ಗ್ರಾನ್‌ಸ್ಲಾಮ್ ಬರ ಎದುರಿಸಿದ್ದ ಫೆಡರರ್, 2017ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸೀಸ್ ಓಪನ್ ಜಯಿಸಿ ಪ್ರಶಸ್ತಿ ಲೋಕಕ್ಕೆ ಪುನರಾಗಮನ ಮಾಡಿದ್ದರು. 37 ವರ್ಷದ ರೋಜರ್ ಬತ್ತಳಿಕೆಯಲ್ಲಿ ಈಗ ಒಟ್ಟು 20 ಗ್ರಾನ್‌ಸ್ಲಾಮ್ ಪ್ರಶಸ್ತಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News