×
Ad

ಹೆಚ್ಚುವರಿ ಬೆರಳು ಕತ್ತರಿಸಿದ ತಾಯಿ: ನವಜಾತ ಶಿಶು ಮರಣ

Update: 2018-12-29 23:10 IST

ಭೋಪಾಲ, ಡಿ.29: ನವಜಾತ ಶಿಶುವಿನ ಕೈ ಮತ್ತು ಪಾದದಲ್ಲಿದ್ದ ಹೆಚ್ಚುವರಿ ಬೆರಳನ್ನು ತಾಯಿ ಕತ್ತರಿಸಿ ತೆಗೆದ ಕಾರಣ ರಕ್ತಸ್ರಾವದಿಂದ ಮಗು ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ವರದಿಯಾಗಿದೆ.

 ಬುಡಕಟ್ಟು ಸಮುದಾಯದ ಮಹಿಳೆ ಈ ಕೃತ್ಯ ಎಸಗಿದ್ದು, ಕಾಲಲ್ಲಿ ಹೆಚ್ಚುವರಿ ಬೆರಳು ಇರುವುದು ಅವಲಕ್ಷಣ ಮತ್ತು ಇದರಿಂದ ಹೆಣ್ಣು ಮಗುವಿಗೆ ವಿವಾಹವಾಗಲು ಅಡ್ಡಿಯಾಗಬಹುದು ಎಂಬ ಆತಂಕದಿಂದ ಮಹಿಳೆ ಹೀಗೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 22ರಂದು ಜನಿಸಿದ್ದ ಈ ಹೆಣ್ಣು ಮಗು ಎರಡೂ ಕೈಗಳಲ್ಲಿ ತಲಾ ಆರು ಬೆರಳು ಮತ್ತು ಎರಡೂ ಕಾಲುಗಳಲ್ಲಿ ತಲಾ ಆರು ಬೆರಳನ್ನು ಹೊಂದಿತ್ತು. ಮಗುವಿನ ಬೆರಳು ಕತ್ತರಿಸಿದ ಮಹಿಳೆಯನ್ನು ಸುಂದರ್‌ದೇ    ವ್ ಗ್ರಾಮದ ತಾರಾಬಾಯಿ ಎಂದು ಗುರುತಿಸಲಾಗಿದೆ. ಕುಡುಗೋಲಿನಿಂದ ಮಗುವಿನ ಕೈ ಮತ್ತು ಕಾಲಲ್ಲಿದ್ದ ಹೆಚ್ಚುವರಿ ಬೆರಳನ್ನು ಕತ್ತರಿಸಲು ಮಹಿಳೆ ಪ್ರಯತ್ನಿಸಿದ್ದು ರಕ್ತಸ್ರಾವದಿಂದ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News