600 ಸಮರ ಟ್ಯಾಂಕ್‌ಗಳ ಖರೀದಿಗೆ ಪಾಕ್ ನಿರ್ಧಾರ

Update: 2018-12-30 17:48 GMT

ಇಸ್ಲಾಮಾಬಾದ್, ಡಿ.30: ತನ್ನ ಶಸ್ತ್ರಾಸ್ತ್ರ ಬತ್ತಳಿಕೆಯ ಆಧುನೀಕರಣಕ್ಕೆ ಮುಂದಾಗಿರುವ ಪಾಕಿಸ್ತಾನವು ರಶ್ಯದಿಂದ ಟಿ-90 ಟ್ಯಾಂಕ್‌ಗಳು ಸೇರಿದಂತೆ 600 ಸಮರ ಟ್ಯಾಂಕ್‌ಗಳನ್ನು ಖರೀದಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಕಟಿಸಿದೆ.

ಭಾರತದ ಗಡಿಯುದ್ದಕ್ಕೂ ತನ್ನ ಸೇನಾಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಅದು ಸಮರ ಟ್ಯಾಂಕ್‌ಗಳ ಖರೀದಿಗೆ ಮುಂದಾಗಿದೆಯೆಂದು ವಿಶ್ಲೇಷಿಸಲಾಗುತ್ತಿದೆ.

 ಪಾಕ್ ಸೇನೆಯ ಖರೀದಿಸಲುದ್ದೇಶಿಸಿರುವ ಬಹುತೇಕ ಟ್ಯಾಂಕ್‌ಗಳು 3ರಿಂದ 4 ಕಿ.ಮೀ.ಗಳ ವ್ಯಾಪ್ತಿಯೊಳಗೆ ಗುರಿಯನ್ನು ಅಪ್ಪಳಿಸುವ ಸಾಮರ್ಥ್ಯವನ್ನು ಹೊಂದಿದೆ. ಜಮ್ಮುಕಾಶ್ಮೀರದ ಗಡಿನಿಯಂತ್ರಣ ರೇಖೆಯುದ್ದಕ್ಕೂ ಅವುಗಳನ್ನು ನಿಯೋಜಿಸುವ ಉದ್ದೇಶವನ್ನು ಪಾಕ್ ಹೊಂದಿದೆ ಎನ್ನಲಾಗಿದೆ.

 ಸಮರ ಟ್ಯಾಂಕ್‌ಗಳ ಜೊತೆಗೆ ಪಾಕ್ ಸೇನೆಯು ಅತ್ಯಾಧುನಿಕ 150 ಎಂಎಂನ ಮೈಕ್ 10 ಬಂದೂಕುಗಳನ್ನು ಇಟಲಿಯಿಂದ ಖರೀದಿಸಲಿದ್ದು, ಈಗಾಗಲೇ ಅದು 120 ಬಂದೂಕುಗಳನ್ನು ಅದು ಪಡೆದಿರುವುದಾಗಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News