ಗ್ರೀನ್ ಕಾರ್ಡ್ ಕೋಟ ರದ್ದತಿಯಿಂದ ಭಾರತ, ಚೀನಾಕ್ಕೆ ಲಾಭ: ಕಾಂಗ್ರೆಸ್ ವರದಿ
Update: 2019-01-02 22:27 IST
ವಾಶಿಂಗ್ಟನ್, ಜ. 2: ಗ್ರೀನ್‌ಕಾರ್ಡ್ ವಿತರಣೆಯಲ್ಲಿ ಈಗ ಅನುಸರಿಸಲಾಗುತ್ತಿರುವ ದೇಶವಾರು ಕೋಟವನ್ನು ರದ್ದುಪಡಿಸಿದರೆ, ಅಮೆರಿಕದ ಕಾರ್ಮಿಕ ಮಾರುಕಟ್ಟೆಯಲ್ಲಿ ಈಗ ನೆಲೆಸಿರುವ ತಾರತಮ್ಯ ಕೊನೆಗೊಳ್ಳುತ್ತದೆ, ಆದರೆ ಅದು ಭಾರತ ಮತ್ತು ಚೀನಾದಂತಹ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕ ಪೌರತ್ವವನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ ಎಂದು ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಇತ್ತೀಚಿನ ವರದಿಯೊಂದು ತಿಳಿಸಿದೆ.
ಗ್ರೀನ್ ಕಾರ್ಡ್ ಪಡೆದ ವಿದೇಶಿಯರು ಅಮೆರಿಕದಲ್ಲಿ ಖಾಯಂ ಆಗಿ ನೆಲೆಸಬಹುದಾಗಿದೆ ಹಾಗೂ ಕೆಲಸ ಮಾಡಬಹುದಾಗಿದೆ.
ಈಗ ಗ್ರೀನ್ ಕಾರ್ಡ್ ಮತ್ತು ಲೀಗಲ್ ಪರ್ಮನೆಂಟ್ ರೆಸಿಡೆನ್ಸಿ (ಎಲ್‌ಪಿಆರ್) ಹಂಚಿಕೆಯಲ್ಲಿ 7 ಶೇಕಡ ದೇಶವಾರು ಕೋಟವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ.