ವಿಭಜಿತ ಜಗತ್ತಿಗೆ ಪೋಪ್ ವಿಷಾದ

Update: 2019-01-02 17:15 GMT

ವ್ಯಾಟಿಕನ್ ಸಿಟಿ, ಜ. 2: ಜಗತ್ತಿನಲ್ಲಿ ನೆಲೆಸಿರುವ ಏಕತೆಯ ಕೊರತೆಗೆ ಪೋಪ್ ಫ್ರಾನ್ಸಿಸ್ ಮಂಗಳವಾರ ವಿಷಾದ ವ್ಯಕ್ತಪಡಿಸಿದ್ದಾರೆ ಹಾಗೂ ಕೆಲವರಿಗೆ ಮಾತ್ರ ಲಾಭ ತರುವ ‘ಸಂಪತ್ತಿನ ಆತ್ಮರಹಿತ ಬೇಟೆ’ಯ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ.

ಇಟಲಿಯ ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ಬ್ಯಾಸಿಲಿಕದಲ್ಲಿ ಸಾಂಪ್ರದಾಯಿ ಹೊಸ ವರ್ಷದ ಪ್ರಾರ್ಥನೆಯ ವೇಳೆ ಮಾಡಿದ ಭಾಷಣದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

‘‘ನಮ್ಮ ಸುತ್ತ ಎಷ್ಟೊಂದು ಪ್ರತ್ಯೇಕತೆ ಮತ್ತು ಏಕಾಂತತೆ ಇದೆ. ಜಗತ್ತು ಸಂಪೂರ್ಣವಾಗಿ ಸಂಪರ್ಕದಲ್ಲಿದೆ, ಆದರೂ ದಿನೇ ದಿನೇ ಪ್ರತ್ಯೇಕಗೊಂಡಂತೆ ಕಾಣುತ್ತಿದೆ’’ ಎಂದು ಪೋಪ್ ಹೇಳಿದರು.

‘‘ ‘ತಾಯಿಯ ದೃಷ್ಟಿ’ಯಿಲ್ಲದೆ ಭವಿಷ್ಯದತ್ತ ನೋಡುವ ಜಗತ್ತಿಗೆ ದೂರದೃಷ್ಟಿಯಿಲ್ಲ. ಅದು ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು, ಆದರೆ, ಅದು ಇತರರನ್ನು ಮಕ್ಕಳಂತೆ ಕಾಣುವುದಿಲ್ಲ. ಅದು ಹಣ ಗಳಿಸಬಹುದು, ಆದರೆ ಎಲ್ಲರಿಗೂ ಅಲ್ಲ. ನಾವೆಲ್ಲ ಒಂದೇ ಮನೆಯಲ್ಲಿ ವಾಸಿಸುತ್ತೇವೆ, ಆದರೆ ಸಹೋದರ, ಸಹೋದರಿಯರಾಗಿ ಅಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News