ನಾಲ್ಕನೇ ಟೆಸ್ಟ್: ಆಸ್ಟ್ರೇಲಿಯ 236/6

Update: 2019-01-05 07:08 GMT

ಸಿಡ್ನಿ,ಜ.5: ಭಾರತ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ತಂಡ 6 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿದೆ.

ಮೂರನೇ ದಿನವಾದ ಶನಿವಾರ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಇನ್ನೂ 16 ಓವರ್‌ಗಳ ಆಟ ಬಾಕಿ ಇರುವಾಗಲೇ ಪಂದ್ಯವನ್ನು ಕೊನೆಗೊಳಿಸಲಾಯಿತು. 4ನೇ ದಿನದಾಟ ಅರ್ಧಗಂಟೆ ಬೇಗನೆ ಆರಂಭವಾಗಲಿದೆ.

ಇಂದು ವಿಕೆಟ್ ನಷ್ಟವಿಲ್ಲದೆ 24 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಕ್ಕೆ ಹ್ಯಾರಿಸ್(79) ಹಾಗೂ ಉಸ್ಮಾನ್ ಖ್ವಾಜಾ(27) ಮೊದಲ ವಿಕೆಟ್‌ಗೆ 72 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಶಿಸುಬದ್ಧ ಬೌಲಿಂಗ್ ಸಂಘಟಿಸಿದ ಭಾರತದ ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್(3-71) ಹಾಗೂ ರವೀಂದ್ರ ಜಡೇಜ(2-62)ಆಸೀಸ್‌ಗೆ ಕಡಿವಾಣ ಹಾಕಿದರು.

ಆಸೀಸ್ ಪರ ಆರಂಭಿಕ ಆಟಗಾರ ಹ್ಯಾರಿಸ್ ಸರ್ವಾಧಿಕ ಸ್ಕೋರ್(79,120 ಎಸೆತ, 8 ಬೌಂಡರಿ)ಗಳಿಸಿದರು. ಹ್ಯಾಂಡ್ಸ್‌ಕಾಂಬ್ (28)ಹಾಗೂ ಕಮಿನ್ಸ್(25)ಕ್ರೀಸ್ ಕಾಯ್ದುಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News