21 ಕೋಟಿ ರೂ. ಗೆ ಹರಾಜಾಯ್ತು ಈ ಮೀನು !

Update: 2019-01-05 17:31 GMT

ಟೋಕಿಯೊ, ಜ. 5: ಜಪಾನ್‌ನಲ್ಲಿ ನಡೆದ 2019ರ ಪ್ರಥಮ ಹರಾಜಿನಲ್ಲಿ 278 ಕೆಜಿ ತೂಕದ ಬ್ಲೂಫಿನ್ ತೂನಾ ಮೀನು ದಾಖಲೆಯ 336.6 ಮಿಲಿಯ ಯೆನ್ (21 ಕೋಟಿ ರೂಪಾಯಿ)ಗೆ ಮಾರಾಟವಾಗಿದೆ.

ಅಪಾಯದಂಚಿನಲ್ಲಿರುವ ಈ ಮೀನನ್ನು ಶನಿವಾರ ಮುಂಜಾನೆ ಹರಾಜು ಹಾಕಲಾಯಿತು. ಇಂದಿನ ಬಿಡ್ 2013ರ ಹೊಸವರ್ಷದ ಹರಾಜಿನ ಬಿಡ್‌ನ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ.

ಈ ಮೀನನ್ನು ಖರೀದಿಸಿದವರು ಕಿಯೊಮುರ ಕಾರ್ಪೊರೇಶನ್. ಅದರ ಮಾಲಿಕ ಕಿಯೊಶಿ ಕಿಮುರ ಅವರು ಸುಶಿ ಝನ್‌ಮೈ ಹೊಟೇಲ್ ಸಮೂಹವನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News