ಐರ್‌ಲ್ಯಾಂಡ್: ಕಡಿದಾದ ಬಂಡೆಯಲ್ಲಿ ಸೆಲ್ಫಿ ತೆಗೆಯುತ್ತಿದ್ದ ಭಾರತೀಯ ಸಮುದ್ರಪಾಲು

Update: 2019-01-05 17:43 GMT

ಡಬ್ಲಿನ್, ಜ. 5: ಐರ್‌ಲ್ಯಾಂಡ್‌ನಲ್ಲಿ ಸಮುದ್ರದ ಕಡಿದಾದ ಬಂಡೆಯೊಂದರ ಮೇಲೆ ಸೆಲ್ಫಿ ತೆಗೆಯುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬ ಕಮರಿಗೆ ಬಿದ್ದು ಮೃತಪಟ್ಟಿದ್ದಾರೆ.

ಪೊಲೀಸರು ವಿದ್ಯಾರ್ಥಿಯ ಹೆಸರನ್ನು ಬಿಡುಗಡೆ ಮಾಡಿಲ್ಲ. ಅವರು ರಾಜಧಾನಿ ಡಬ್ಲಿನ್‌ನ ವಿಶ್ವವಿದ್ಯಾನಿಲಯವೊಂದರಲ್ಲಿ ಕಲಿಯುತ್ತಿದ್ದರು.

ಶುಕ್ರವಾರ ಅಪರಾಹ್ನ ಕೌಂಟಿ ಕ್ಲೇರ್‌ನಲ್ಲಿರುವ ಪ್ರಸಿದ್ಧ ಪ್ರವಾಸಿ ಆಕರ್ಷಣೆ ಮೋಹರ್‌ನ ಕಡಿದಾದ ಬಂಡೆಯ ಮೇಲೆ ತನ್ನ ಚಿತ್ರ ತೆಗೆಯುತ್ತಿದ್ದಾಗ ಸಮತೋಲನ ಕಳೆದುಕೊಂಡ ಅವರು ಆಳವಾದ ಕಮರಿಗೆ ಬಿದ್ದರು ಎಂದು ‘ಐರಿಶ್ ಮಿರರ್’ ವರದಿ ಮಾಡಿದೆ.

ಬಳಿಕ ಹೆಲಿಕಾಪ್ಟರ್‌ನಲ್ಲಿ ಬಂದ ರಕ್ಷಣಾ ಸಿಬ್ಬಂದಿ ವಿದ್ಯಾರ್ಥಿಯ ಶವವನ್ನು ಮೇಲೆತ್ತಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News