ಉದ್ವಿಗ್ನತೆ ಶಮನ ಮಾತುಕತೆಗಾಗಿ ಚೀನಾಕ್ಕೆ ಅಮೆರಿಕ ತಂಡ

Update: 2019-01-05 17:46 GMT

ವಾಶಿಂಗ್ಟನ್, ಜ. 5: ಅಮೆರಿಕ-ಚೀನಾ ವಾಣಿಜ್ಯ ಸಮರದಿಂದ ಉದ್ಭವಿಸಿದ ಉದ್ವಿಗ್ನತೆಯನ್ನು ಶಮನಗೊಳಿಸುವ ಉದ್ದೇಶದೊಂದಿಗೆ ಅಮೆರಿಕದ ಸಂಧಾನಕಾರರ ತಂಡವೊಂದು ಸೋಮವಾರ ಚೀನಾಕ್ಕೆ ತೆರಳಲಿದೆ.

ತಂಡದ ಸದಸ್ಯರು ಚೀನಾದ ಅಧಿಕಾರಿಗಳೊಂದಿಗೆ ಉದ್ವಿಗ್ನತೆ ನಿವಾರಣೆಯ ನಿಟ್ಟಿನಲ್ಲಿ ಮಾತುಕತೆಗಳನ್ನು ನಡೆಸುತ್ತಾರೆ.

ಇರಾನ್ ಮೇಲೆ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳನ್ನು ಉಲ್ಲಂಘಿಸಿದ ಆರೋಪದಲ್ಲಿ, ಚೀನಾದ ತಂತ್ರಜ್ಞಾನ ದೈತ್ಯ ಹುವಾವೆಯ ಹಿರಿಯ ಅಧಿಕಾರಿಯೊಬ್ಬರನ್ನು ಅಮೆರಿಕದ ಸೂಚನೆಯ ಮೇರೆಗೆ ಕೆನಡದಲ್ಲಿ ಬಂಧಿಸಿಟ್ಟಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಉದ್ವಿಗ್ನತೆಯ ಹೊರತಾಗಿಯೂ, ಉಭಯ ದೇಶಗಳ ನಡುವೆ ವ್ಯಾಪಾರಿ ಮಾತುಕತೆ ನಡೆಯುತ್ತಿದೆ.

ವಿವಾದಗಳನ್ನು ಇತ್ಯರ್ಥಗೊಳಿಸುವ ಇಂಗಿತವನ್ನು ಉಭಯ ದೇಶಗಳು ವ್ಯಕ್ತಪಡಿಸಿವೆಯಾದರೂ, ತಮ್ಮ ನಿಲುವುಗಳನ್ನು ಬದಲಿಸಿರುವ ಸೂಚನೆಯನ್ನು ಅವುಗಳು ನೀಡಿಲ್ಲ.

ಚೀನಾದ ಸಶಸ್ತ್ರ ಪಡೆಗಳು ಹೊಸ ಕಾಲದ ಸವಾಲುಗಳನ್ನು ಎದುರಿಸಲು ತಂತ್ರಗಾರಿಕೆಗಳನ್ನು ರೂಪಿಸಬೇಕು ಹಾಗೂ ಯುದ್ಧಕ್ಕಾಗಿ ಸಿದ್ಧಗೊಳ್ಳುವ ಮತ್ತು ಯುದ್ಧ ಮಾಡುವ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು.

ಕ್ಸಿ ಜಿನ್‌ಪಿಂಗ್, ಚೀನಾ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News