ಅಕ್ರಮ ಮರಳು ಗಣಿಗಾರಿಕೆ: ಉ.ಪ್ರದೇಶ, ದಿಲ್ಲಿಯಲ್ಲಿ ಸಿಬಿಐ ದಾಳಿ

Update: 2019-01-05 18:09 GMT

 ಹೊಸದಿಲ್ಲಿ, ಜ.5: ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ದಿಲ್ಲಿ ಮತ್ತು ಉತ್ತರಪ್ರದೇಶದ 12 ಸ್ಥಳಗಳಿಗೆ ದಾಳಿ ಮಾಡಿ ತನಿಖೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭ್ರಷ್ಟಾಚಾರ ವಿರೋಧಿ ಅಭಿಯಾನದ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಗಿರುವ ಐಎಎಸ್ ಅಧಿಕಾರಿ ಬಿ.ಚಂದ್ರಕಲಾ ಸಹಿತ ಹಲವು ಹಿರಿಯ ಅಧಿಕಾರಿಗಳ ಮನೆಗೆ ದಾಳಿ ನಡೆಸಲಾಗಿದೆ. ಜಲಾನ್,್ ಹಾಮಿರ್‌ಪುರ, ಲಕ್ನೊ, ರಾಷ್ಟ್ರೀಯ ರಾಜಧಾನಿ ದಿಲ್ಲಿ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ. ಅಲಹಾಬಾದ್ ಹೈಕೋರ್ಟ್‌ನ ಸೂಚನೆ ಮೇರೆಗೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಪ್ರದೇಶದ ಈ ಹಿಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸರಕಾರಕ್ಕೆ ನಿಕಟರಾಗಿದ್ದ ಚಂದ್ರಕಲಾ, ಹಾಮಿರ್‌ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿಯಮ ಮೀರಿ ಮರಳು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದರು ಎಂದು ಆರೋಪಿಸಿ 2015ರಲ್ಲಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆಯ ಹಂತದಲ್ಲಿರುವಾಗಲೂ ಹಾಮಿರ್‌ಪುರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮುಂದುವರಿದಿದೆ ಎಂಬುದನ್ನು ಹೈಕೋರ್ಟ್‌ನ ಗಮನಕ್ಕೆ ತಂದ ಬಳಿಕ 2016ರ ಜುಲೈ 28ರಂದು ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News