×
Ad

ಪಾಕ್‌ಗೆ ಅಬುಧಾಭಿ ಯುವರಾಜ ಅಲ್ ನಹ್ಯಾನ್ ಆಗಮನ

Update: 2019-01-06 23:05 IST

ಇಸ್ಲಾಮಾಬಾದ್,ಜ.6: ಪಾಕ್ ಪ್ರವಾಸ ಕೈಗೊಂಡಿರುವ ಅಬುಧಾಭಿಯ ಯುವರಾಜ ಶೇಖ್ ಮುಹಮ್ಮದ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ರವಿವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನವು ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಹಾಗೂ ಸರಕಾದ ಆರ್ಥಿಕ ನೀತಿಗಳನ್ನು ಉತ್ತೇಜಿಸಲು ಯುಎಇನಿಂದ ಆರ್ಥಿಕ ನೆರವನ್ನು ಕೋರಿದೆ.

 ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಕಳೆದ ಆಗಸ್ಟ್‌ನಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಪಾಕಿಸ್ತಾನವು ತನ್ನನ್ನು ತೀವ್ರವಾಗಿ ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನವು ಸೌದಿ ಆರೇಬಿಯ, ಚೀನಾ ಹಾಗೂ ಯುಎಇನಂತಹ ತನ್ನ ಮಿತ್ರ ರಾಷ್ಟ್ರಗಳಿಂದ ನೆರವನ್ನು ಯಾಚಿಸಿದೆ.

ಕಳೆದ 12 ವರ್ಷಗಳಲ್ಲಿ ಯುಎಇನ ಯುವರಾಜ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಸಲವಾಗಿದೆ. ರಾವಲ್ಪಿಂಡಿಯ ನೂರ್‌ಖಾನ್ ವಾಯುನೆಲೆಯಲ್ಲಿ ಬಂದಿಳಿದ ಯುಎಇ ಅಲ್ ನಹ್ಯಾನ್ ಅವನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಸ್ವಾಗತಿಸಿದರು.

ಕಳೆದ ಆಗಸ್ಟ್‌ನಿಂದೀಚೆಗೆ ಇಮ್ರಾನ್ ಖಾನ್ ಅವರು ಎರಡು ಬಾರಿ ಯುಎಇಗೆ ಭೇಟಿ ನೀಡಿದರು. ದೇಶದ ವಿದೇಶಿ ವಿನಿಮಯ ಬಿಕ್ಕಟ್ಟನ್ನು ನಿವಾರಿಸಲು ಅವರು ಯುಎಇ ಆಡಳಿತದ ನೆರವು ಕೋರಿದ್ದರು. ಕಳೆದ ವಾರದಲ್ಲಿ ಪಾಕಿಸ್ತಾನ ಹಾಗೂ ಯುಎಇ, ಇಸ್ಲಾಮಾಬಾದ್ ಕೆಲವು ಶರತ್ತುಗಳೊದಿಗೆ 6.2 ಶತಕೋಟಿ ಡಾಲರ್‌ಗಳ ಆರ್ಥಿಕ ನೆರವಿನ ಪ್ಯಾಕೇಜ್ ನೀಡುವ ಒಪ್ಪಂದಕ್ಕೆ ಕಳೆದ ವಾರ ಸಹಿಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News