×
Ad

ಚಿನ್ನದ ಗಣಿಯಲ್ಲಿ ಭೂಕುಸಿತ: ಕನಿಷ್ಠ 30 ಕಾರ್ಮಿಕರು ಬಲಿ

Update: 2019-01-06 23:09 IST

ಕಾಬೂಲ್,ಜ.6: ಅಫ್ಘಾನಿಸ್ತಾನದ ಉತ್ತರ ಬಡಾಕ್ಸನ್ ಪ್ರಾಂತದಲ್ಲಿ ರವಿವಾರ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಕನಿಷ್ಠ 30 ಮಂದಿ ಚಿನ್ನದ ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಕೊಹಿಸ್ತಾನ್ ಜಿಲ್ಲೆಯಲ್ಲಿರುವ ಚಿನ್ನದ ಗಣಿಯೊಂದರ ಒಳಗಡೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿರುವುದಾಗಿ ಬಡಾಕ್ಷನ್‌ನ ಪ್ರಾಂತೀಯ ಪೊಲೀಸ್ ವಕ್ತಾರ ತಿಳಿಸಿದ್ದಾರೆ. ಘಟನೆಯಲ್ಲಿ ಇತರ 20 ಮಂದಿಗೆ ಗಾಯಗಳಾಗಿರುವುದಾಗಿಯೂ ಅವರು ತಿಳಿಸಿದ್ದಾರೆ. ಉತ್ತರ ಅಫ್ಘಾನಿಸ್ತಾನದ ಪರ್ವತಾಚ್ಛಾದಿತ ಪ್ರಾಂತದಲ್ಲಿ ಭೂಕುಸಿತಗಳು ಪದೇಪದೇ ಸಂಭವಿಸುತ್ತಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News