ಬಾಂಗ್ಲಾ: 4ನೇ ಬಾರಿಗೆ ಪ್ರಧಾನಿಯಾಗಿ ಹಸೀನಾ ಪ್ರಮಾಣವಚನ

Update: 2019-01-07 16:41 GMT

ಢಾಕಾ, ಜ. 7: ಶೇಖ್ ಹಸೀನಾ ಸೋಮವಾರ ಸತತ ಮೂರನೇ ಬಾರಿಗೆ ಹಾಗೂ ಒಟ್ಟು ನಾಲ್ಕನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಡಿಸೆಂಬರ್ 30ರ ಚುನಾವಣೆಯಲ್ಲಿ ಅವರ ಅವಾಮಿ ಲೀಗ್ ಪಕ್ಷ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವುದನ್ನು ಸ್ಮರಿಸಬಹುದಾಗಿದೆ.

ಬಂಗಭಬನ್‌ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಮುಹಮ್ಮದ್ ಅಬ್ದುಲ್ ಹಾಮಿದ್ 71 ವರ್ಷದ ನಾಯಕಿಗೆ ಪ್ರಮಾಣವಚನ ಬೋಧಿಸಿದರು.

ಹಸೀನಾರ ಆಡಳಿತಾರೂಢ ಗ್ರಾಂಡ್ ಅಲಯನ್ಸ್ ಚುನಾವಣೆ ನಡೆದ ಒಟ್ಟು ಸ್ಥಾನಗಳ ಪೈಕಿ 96 ಶೇಕಡವನ್ನು ಗೆದ್ದಿದೆ.

ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ, ಮತದಾರರನ್ನು ಬೆದರಿಸಲಾಗಿದೆ ಹಾಗೂ ಹಿಂಸಾಚಾರ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News