ಸೌದಿ ಬಾಲಕಿಯನ್ನು ವಾಪಸ್ ಕಳುಹಿಸುವುದಿಲ್ಲ: ಥಾಯ್ಲೆಂಡ್

Update: 2019-01-07 16:44 GMT

ಬ್ಯಾಂಕಾಕ್, ಜ. 7: ಸೌದಿ ಅರೇಬಿಯದಿಂದ ಪರಾರಿಯಾಗಿರುವ 18 ವರ್ಷದ ಬಾಲಕಿಯನ್ನು ಗಡಿಪಾರು ಮಾಡುವುದಿಲ್ಲ ಎಂದು ಥಾಯ್ಲೆಂಡ್ ಸೋಮವಾರ ತಿಳಿಸಿದೆ.

ರಹಾಫ್ ಮುಹಮ್ಮದ್ ಅಲ್-ಕುನೂನ್ ಕುವೈತ್‌ನಲ್ಲಿರುವಾಗ ತನ್ನ ಕುಟುಂಬ ಸದಸ್ಯರಿಂದ ತಪ್ಪಿಸಿಕೊಂಡು ಬಂದಿದ್ದಾರೆ. ತನ್ನ ಕುಟುಂಬ ಸದಸ್ಯರು ತನ್ನನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಇದಕ್ಕೂ ಮೊದಲು, ತಂದೆ ಮತ್ತು ಸಹೋದರನಿರುವ ಕುವೈತ್‌ಗೆ ರಹಾಫ್‌ರನ್ನು ಬಲವಂತದಿಂದ ಕಳುಹಿಸಿಕೊಡಲು ಥಾಯ್ಲೆಂಡ್ ಅಧಿಕಾರಿಗಳು ಮುಂದಾಗಿದ್ದರು.

ಅವರೀಗ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಪ್ರಧಾನ ವಿಮಾನ ನಿಲ್ದಾಣದಲ್ಲಿ ವಾಸಿಸುತ್ತಿದ್ದಾರೆ.

“ನಾನು ಕುವೈತ್‌ನಿಂದ ಜನವರಿ 5ರಂದು ಬ್ಯಾಂಕಾಕ್ ವಿಮಾನ ನಿಲ್ದಾಣಕ್ಕೆ ಬಂದೆ ಹಾಗೂ ಇಲ್ಲಿ ನನ್ನ ಪಾಸ್‌ಪೋರ್ಟನ್ನು ವಶಪಡಿಸಿಕೊಳ್ಳಲಾಗಿದೆ, ಹಾಗಾಗಿ, ನನಗೆ ಆಸ್ಟ್ರೇಲಿಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ” ಎಂಬುದಾಗಿ ಬಾಲಕಿ ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News