ಉತ್ತರ ಕೊರಿಯ ನಾಯಕ ಚೀನಾದಲ್ಲಿ

Update: 2019-01-08 17:39 GMT

ಬೀಜಿಂಗ್, ಜ. 8: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಸೋಮವಾರ ಮೂರು ದಿನಗಳ ಅಘೋಷಿತ ಭೇಟಿಗಾಗಿ ರೈಲಿನಲ್ಲಿ ಬೀಜಿಂಗ್‌ಗೆ ತೆರಳಿದ್ದಾರೆ. ಇದು ಕಳೆದ ವರ್ಷದ ಮಾರ್ಚ್‌ನಿಂದ ಅವರು ಚೀನಾಕ್ಕೆ ನೀಡುತ್ತಿರುವ ನಾಲ್ಕನೇ ಭೇಟಿಯಾಗಿದೆ.

ಅವರು ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸಿದ್ದು, ಪರಮಾಣು ನಿಶ್ಶಸ್ತ್ರೀಕರಣ ಮಾತುಕತೆಗಳನ್ನು ಮುಂದುವರಿಸುವ ವಿಷಯದಲ್ಲಿ ಚೀನಾದ ಸಲಹೆ ಮತ್ತು ಭರವಸೆಗಳನ್ನು ಪಡೆಯಲು ಬೀಜಿಂಗ್‌ಗೆ ಬಂದಿದ್ದಾರೆ ಎಂಬುದಾಗಿ ಭಾವಿಸಲಾಗಿದೆ.

ಗುರುವಾರದವರೆಗಿನ ವಾಸ್ತವ್ಯದ ವೇಳೆ, ಕಿಮ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಸುದೀರ್ಘ ಮಾತುಕತೆಗಳನ್ನು ನಡೆಸುತ್ತಾರೆ ಎಂದು ಊಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News