ಮೆಲ್ಬೋರ್ನ್: ಭಾರತೀಯ ರಾಯಭಾರ ಕಚೇರಿ ಸೇರಿ ಹಲವೆಡೆ ಸಂಶಯಾಸ್ಪದ ವಸ್ತುಗಳು ಪತ್ತೆ

Update: 2019-01-09 15:05 GMT

ಮೆಲ್ಬರ್ನ್, ಜ. 9: ಭಾರತೀಯ ಕೌನ್ಸುಲೇಟ್ ಸೇರಿದಂತೆ, ಮೆಲ್ಬರ್ನ್‌ನಲ್ಲಿರುವ ಹಲವಾರು ದೇಶಗಳ ರಾಜತಾಂತ್ರಿಕ ಕಚೇರಿಗಳಲ್ಲಿ ಬುಧವಾರ ಸಂಶಯಾಸ್ಪದ ಪೊಟ್ಟಣಗಳು ಪತ್ತೆಯಾಗಿವೆ.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯ ಅಧಿಕಾರಿಗಳು ಬೃಹತ್ ತಪಾಸಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

‘‘ರಾಯಭಾರ ಕಚೇರಿಗಳು ಮತ್ತು ಕೌನ್ಸುಲೇಟ್ ಕಚೇರಿಗಳಲ್ಲಿ ಶಂಕಾಸ್ಪದ ಪೊಟ್ಟಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ತುರ್ತು ಸೇವಾ ಸಂಸ್ಥೆಗಳು ತುರ್ತು ಕ್ರಮ ತೆಗೆದುಕೊಂಡಿದ್ದಾರೆ. ಈ ಸಂಸ್ಥೆಗಳ ಪರಿಣತರು ಪೊಟ್ಟಣಗಳನ್ನು ಪರಿಶೀಲಿಸುತ್ತಿದ್ದಾರೆ. ಅವುಗಳನ್ನು ಅಲ್ಲಿ ಹೇಗೆ ಇಡಲಾಗಿದೆ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ’’ ಎಂದು ಆಸ್ಟ್ರೇಲಿಯನ್ ಫೆಡರಲ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಮೆಲ್ಬರ್ನ್‌ನಲ್ಲಿರುವ ಬ್ರಿಟನ್ ಕೌನ್ಸುಲೇಟ್, ಕೊರಿಯನ್ ಕೌನ್ಸುಲೇಟ್, ಜರ್ಮನ್ ಕೌನ್ಸುಲೇಟ್, ಇಟಲಿ ಕೌನ್ಸುಲೇಟ್, ಸ್ವಿಟ್ಸರ್‌ಲ್ಯಾಂಡ್ ಕೌನ್ಸುಲೇಟ್, ಪಾಕಿಸ್ತಾನ್ ಕೌನ್ಸುಲೇಟ್, ಗ್ರೀಸ್ ಕೌನ್ಸುಲೇಟ್ ಮತ್ತು ಇಂಡೋನೇಶ್ಯ ಕೌನ್ಸುಲೇಟ್ ಕಚೇರಿಗಳಲ್ಲೂ ಸಂಶಯಾಸ್ಪದ ಪೊಟ್ಟಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News