2019-20ರಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆ: ವಿಶ್ವಬ್ಯಾಂಕ್

Update: 2019-01-09 15:49 GMT

ವಿಶ್ವಸಂಸ್ಥೆ, ಜ. 9: ನೀತಿ ಸುಧಾರಣೆಗಳು ಮತ್ತು ಸಾಲ ನಿರ್ವಹಣೆಯಲ್ಲಿನ ಚೇತರಿಕೆ ಹಿನ್ನೆಲೆಯಲ್ಲಿ, 2019-20ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು 7.5 ಶೇಕಡದಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.

ಈ ಮೂಲಕ ಅದು ಬೆಳವಣಿಗೆ ಕುಂಠಿತಗೊಳ್ಳುತ್ತಿರುವ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ತನ್ನ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಲಿದೆ.

ಆದಾಗ್ಯೂ, ದಕ್ಷಿಣ ಏಶ್ಯದಲ್ಲಿ ಮುಂಬರುವ ಚುನವಣೆಗಳ ಹಿನ್ನೆಲೆಯಲ್ಲಿ, ಈ ವಲಯದ ರಾಜಕೀಯ ಅಸ್ಥಿರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಸಿದೆ.

‘‘ಸವಾಲುದಾಯಕ ರಾಜಕೀಯ ಪರಿಸರವು ಕೆಲವು ದೇಶಗಳಲ್ಲಿನ ಹಾಲಿ ಸುಧಾರಣಾ ಕಾರ್ಯಸೂಚಿ ಮತ್ತು ಆರ್ಥಿಕ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News