ಬಳಕೆದಾರರ ಮಾಹಿತಿ ಮಾರಾಟ ಮಾಡಲು ಯೋಚಿಸಿದ್ದ ಫೇಸ್‌ಬುಕ್

Update: 2019-01-12 16:39 GMT

ಸಾನ್‌ಫ್ರಾನ್ಸಿಸ್ಕೊ, ಜ. 12: ಬಳಕೆದಾರರ ದತ್ತಾಂಶವನ್ನು ಮಾರಾಟ ಮಾಡುವ ಬಗ್ಗೆ ಕೆಲವು ವರ್ಷಗಳ ಹಿಂದೆ ಫೇಸ್‌ಬುಕ್ ಯೋಚಿಸಿತ್ತು, ಆದರೆ ಬಳಿಕ ಹಾಗೆ ಮಾಡದಿರಲು ನಿರ್ಧರಿಸಿತು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

 ಬಳಕೆದಾರರ ದತ್ತಾಂಶದ ಪ್ರಮುಖ ಸಂಗ್ರಹಗಾರಗಳ ಪೈಕಿ ಒಂದಾಗಿರುವ ‘ಗ್ರಾಫ್ ಎಪಿಐ’ಯನ್ನು ಕನಿಷ್ಠ 2,50,000 ಡಾಲರ್ (ಸುಮಾರು 1.76 ಕೋಟಿ ರೂಪಾಯಿ)ಗೆ ಕಂಪೆನಿಗಳಿಗೆ ಮಾರಾಟ ಮಾಡಲು 2012ರಲ್ಲಿ ಫೇಸ್‌ಬುಕ್ ಸಿಬ್ಬಂದಿ ನಿರ್ಧರಿಸಿದ್ದರು ಎಂದು ವೆಬ್‌ಸೈಟ್ ಒಂದು ವರದಿ ಮಾಡಿದೆ.

2014ರಲ್ಲಿ ಗ್ರಾಫ್ ಎಪಿಐ ಕೆಲಸ ಮಾಡುವ ವಿಧಾನವನ್ನೇ ಫೇಸ್‌ಬುಕ್ ಬದಲಾಯಿಸಿತು. ಮಾಹಿತಿ ಕೋಶಕ್ಕೆ ನೀಡಿದ್ದ ಪ್ರವೇಶ ಅವಕಾಶವನ್ನು ಫೇಸ್‌ಬುಕ್ ನಿರ್ಬಂಧಿಸಿತು ಎಂದು ಶುಕ್ರವಾರ ಪ್ರಕಟಗೊಂಡ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News