ಕುರ್ದ್ ಮೇಲೆ ದಾಳಿ ನಡೆದರೆ ಟರ್ಕಿಯ ಸರ್ವನಾಶ: ಟ್ರಂಪ್

Update: 2019-01-14 17:50 GMT

ವಾಶಿಂಗ್ಟನ್, ಜ. 14: ಸಿರಿಯದಿಂದ ಅಮೆರಿಕ ಪಡೆಗಳು ವಾಪಸಾದ ಬಳಿಕ ಟರ್ಕಿಯು ಕುರ್ದಿಶ್ ಪಡೆಗಳ ಮೇಲೆ ದಾಳಿ ನಡೆಸಿದರೆ, ಅದನ್ನು ಆರ್ಥಿಕವಾಗಿ ಸರ್ವನಾಶಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಎಚ್ಚರಿಸಿದ್ದಾರೆ.

ಅದೇ ವೇಳೆ, ಟರ್ಕಿಯನ್ನು ‘ಪ್ರಚೋದಿಸದಂತೆ’ಯೂ ಅಮೆರಿಕ ಕುರ್ದ್‌ಗಳನ್ನು ಒತ್ತಾಯಿಸಿದೆ.

‘‘ಟರ್ಕಿಯು ಕುರ್ದ್‌ ಗಳ ಮೇಲೆ ದಾಳಿ ನಡೆಸಿದರೆ ಅದನ್ನು ಆರ್ಥಿಕವಾಗಿ ಸರ್ವನಾಶಗೊಳಿಸುತ್ತೇವೆ’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. 30 ಕಿಲೋಮೀಟರ್ ವ್ಯಾಪ್ತಿಯ ಸುರಕ್ಷಾ ವಲಯವೊಂದನ್ನು ಸ್ಥಾಪಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.

ಆದರೆ, ಭಯೋತ್ಪಾದಕ ಸಂಘಟನೆಯಾಗಿರುವ ಕುರ್ದಿಶ್ ಪೀಪಲ್ಸ್ ಪ್ರೊಟೆಕ್ಷನ್ ಯೂನಿಟ್ಸ್ ವಿರುದ್ಧದ ದಾಳಿಯನ್ನು ಮುಂದುವರಿಸುವುದಾಗಿ ಟರ್ಕಿ ಸೋಮವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News