ತಾಳಿಕೋಟೆ ಕದನಕ್ಕೆ ಕೋಮುವಾದದ ಬಣ್ಣ ಬಳಿದ ಕೇಸರಿ ಇತಿಹಾಸಕಾರರು

Update: 2019-01-15 18:36 GMT

ಭಾಗ-1 

 ವಿಜಯನಗರ ಸಾಮ್ರಾಜ್ಯವು ವ್ಯೆಹಾತ್ಮಕವಾಗಿ, ಒಂದಲ್ಲಾ ಒಂದು ಸುಲ್ತಾನನ ಜೊತೆ ಮೈತ್ರಿಯನ್ನು ಬೆಳೆಸಿಕೊಂಡಿರುತ್ತಿತ್ತು. ಸುಲ್ತಾನಶಾಹಿಯಲ್ಲೊಂದರ ಜೊತೆ ವಿಜಯನಗರದ ನಡುವೆ ನೇರ ಯುದ್ಧ ನಡೆದಾಗ, ವಿಜಯನಗರ ಜಯಗಳಿಸಿತ್ತು. ಹಾಗೆಯೇ 1520ರಲ್ಲಿ ರಾಯಚೂರಿನಲ್ಲಿ ನಡೆದ ಕಾಳಗದಲ್ಲಿಯೂ ಕೃಷ್ಣದೇವರಾಯ, ಬಿಜಾಪುರ ಸುಲ್ತಾನನ್ನು ಸೋಲಿಸಿದ್ದನು.
   ಹಾಗಾದರೆ ನಿರಂತರವಾಗಿ ತಮ್ಮಳಗೆ ಕಚ್ಚಾಡುತ್ತಿದ್ದ ಸಣ್ಣ ಸಾಮ್ರಾಜ್ಯಗಳ ಗುಂಪೊಂದರಿಂದ ವಿಜಯನಗರದಂತಹ ಮಹಾನ್ ಸಾಮ್ರಾಜ್ಯವು ಯಾಕೆ ನಾಶಗೊಂಡಿತು:?. ಭೀಕರ ತಾಳಿಕೋಟೆ ಕದನದಲ್ಲಿ ಇದು ಸಂಭವಿಸಿತು.

ತಾಳಿಕೋಟೆಯ ಕದನವು ಒಂದು ಧರ್ಮಯುದ್ಧವೆಂಬುದಾಗಿ ಹಲವಾರು ವೇದಿಕೆಗಳಲ್ಲಿ ಬಿಂಬಿಸಲಾಗುತ್ತಿದೆ ಹಾಗೂ ಬಲಪಂಥೀಯ ಇತಿಹಾಸಕಾರರು ಈ ಸಿದ್ಧಾಂತವನ್ನು ಪುನರುಚ್ಚರಿಸುತ್ತಲೇ ಬಂದಿದ್ದಾರೆ ಹಾಗೂ ಆ ಮೂಲಕ ಸಮಕಾಲೀನ ಭಾರತದಲ್ಲಿ ಮುಸ್ಲಿಮರನ್ನು ಪರಕೀಯಗೊಳಿಸುವುದನ್ನು ಖಾತರಿಪಡಿಸಿಕೊಳ್ಳುತ್ತಾರೆ.
ನವೆಂಬರ್ ತಿಂಗಳ ಬಿಸಿಲಿನ ದಿನಗಳಲ್ಲಿ, ಸಹಸ್ರಾರು ಪ್ರವಾಸಿಗರು ಕರ್ನಾಟಕದ ಹಂಪೆಯ ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳಲು ವಾಹನಗಳಿಗಾಗಿ ಕಾಯುತ್ತಿರುವುದನ್ನು ಕಾಣಬಹುದಾಗಿದೆ. ಇಲೆಕ್ಟ್ರಿಕ್ ಗಾಡಿಗಳು, ಪ್ರವಾಸಿಗರನ್ನು ಮಣ್ಣಿನ ರಸ್ತೆಯಾಗಿ ಕೊಂಡೊಯ್ಯುತ್ತವೆ. ದಾರಿಯುದ್ದಕ್ಕೂ ಹಂಪೆಯ ಬೃಹತ್ ಹೆಬ್ಬಂಡೆಗಳು ಎದ್ದುಕಾಣುತ್ತವೆ.
 ‘‘ವಿಜಯವಿಠಲ ದೇವಸ್ಥಾನವು ಹಂಪೆಯ ಅತ್ಯಂತ ಶ್ರೇಷ್ಠ ಆಕರ್ಷಣೆ ಯಾಗಿದೆ. ತಾಳಿಕೋಟೆ ಯುದ್ಧದ ಬಳಿಕ ಮುಸ್ಲಿಮರು ನಗರದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಈ ದೇವಾಲಯವನ್ನು ಹಾಗೂ ಹಂಪೆಯ ಬಹುತೇಕ ಭಾಗಗಳನ್ನು ನಾಶಪಡಿಸಿದ್ದಾರೆ’’ ಎಂದು ಗೈಡ್ ಒಬ್ಬಾತ ತನ್ನ ಕೈಯನ್ನು ಸುತ್ತಲೂ ತಿರುಗಿಸುತ್ತಾ ಹೇಳಿದನು. ಈ ಮಾಹಿತಿಯ ತುಣುಕನ್ನು ಕಿವಿಗೆ ಹಾಕಿಕೊಂಡ ಪ್ರವಾಸಿಗರು, ಕಲ್ಲಿನ ರಥದೆಡೆಗೆ ಸಾಗುತ್ತಾರೆ. ಅಲ್ಲಿ ಅವರು ಛಾಯಾಚಿತ್ರಗಳಿಗಾಗಿ ಪೋಸ್ ಕೊಡುತ್ತಾರೆ. ಮುಸ್ಲಿಮರು ಹಿಂದೂಗಳನ್ನು ಪರಾಭವಗೊಳಿಸಿ, ಹಂಪೆಯನ್ನು ಹಾಳುಗೆಡವಿದರೆಂಬ ವಿವರಗಳನ್ನು ಗೈಡ್‌ಗಳು ವಿಷದವಾಗಿ ವಿವರಿಸುತ್ತಾರೆ. 1565ರ ಜನವರಿಯಲ್ಲಿ ತಾಳಿಕೋಟೆ ಕದನವು, ದಖ್ಖಣದ ಸುಲ್ತಾನರ ಸಂಯೋಜಿತ ಸೇನೆ ಹಾಗೂ ವಿಜಯನಗರ ಸಾಮ್ರಾಜ್ಯದ ಸೇನೆಯ ನಡುವೆ ನಡೆದ ಕಥೆಯನ್ನು ಗೈಡ್‌ಗಳು ಪ್ರತಿದಿನವೂ ಹಂಪೆಗೆ ಬರುವ ಪ್ರವಾಸಿಗರ ಮುಂದೆ ಉರುಹೊಡೆಯುತ್ತಾರೆ.
  ಆದರೆ ಈ ನಿರೂಪಣೆಯನ್ನು ಗಿರೀಶ್ ಕಾರ್ನಾಡ್ ಅವರ ನೂತನ ನಾಟಕ ‘ರಕ್ಕಸ ತಂಗಡಿ’ ಪ್ರಶ್ನಿಸುತ್ತದೆ. ತಾಳಿಕೋಟೆ ಕದನವು ಧಾರ್ಮಿಕ ಕಾರಣಗಳಿಗಾಗಿ ನಡೆಯಿತು ಎಂಬ ಬಲಪಂಥೀಯ ಇತಿಹಾಸಕಾರರ ವಾದವನ್ನು ಅದು ಭೇದಿಸಿದೆ. ಹಿಂದುತ್ವ ಹಾಗೂ ಮುಸ್ಲಿಂವಾದದ ಪಡೆಗಳ ನಡುವೆ ನಡೆದ ಐತಿಹಾಸಿಕ ಯುದ್ಧ ಇದಾಗಿದ್ದು, ಅದರಲ್ಲಿ ಮುಸ್ಲಿಮರು ಜಯಗಳಿಸಿದರೆಂಬ ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ವ್ಯಾಖ್ಯಾನದ ಬಗ್ಗೆ ಗಂಭೀರ ಚರ್ಚೆ ನಡೆಸಲು ಈ ನಾಟಕವು ಆಸ್ಪದ ನೀಡಿದೆ. ಐತಿಹಾಸಿಕ ಕಥೆಗಳನ್ನು ಆಯ್ದುತೆಗೆಯುವಲ್ಲಿ ಹಾಗೂ ಅವುಗಳಿಗೊಂದು ತಾಜಾ ಹಾಗೂ ಸೂಕ್ಷ್ಮ ವ್ಯತ್ಯಾಸದ ಗ್ರಹಿಕೆಯನ್ನು ನೀಡುವಲ್ಲಿ ಕಾರ್ನಾಡ್ ನಿಸ್ಸೀಮರು. ರಕ್ಕಸ ತಂಗಡಿ ನಾಟಕದ ಮೂಲಕ ಕಾರ್ನಾಡ್ ಅವರು ಈಗಲೂ ಕೂಡಾ ತಾನೋರ್ವ ಜನಪ್ರಿಯ ನಾಟಕಕಾರನಾಗಿಯೇ ಉಳಿದುಕೊಂಡಿರುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
ಅಳಿಯ ರಾಮರಾಯ
   ವಯೋವೃದ್ಧ ಅಳಿಯ ರಾಮರಾಯ (1485-1565) ಈ ನಾಟಕದ ಕೇಂದ್ರ ಪಾತ್ರವಾಗಿದ್ದಾನೆ. ಈತ ವಿಜಯನಗರ ಸಾಮ್ರಾಜ್ಯದ ರಾಜಪ್ರತಿನಿಧಿ ಹಾಗೂ ಕೃಷ್ಣದೇವರಾಯನ (1509-29) ಅಳಿಯ. ಈ ನಾಟಕವು ಅಳಿಯ ರಾಮರಾಯನನ್ನು ಒಂದು ಸಂಕೀರ್ಣ ಪಾತ್ರವಾಗಿ ಬಿಂಬಿಸಿದೆ. ಆತನೊಬ್ಬ ಉದಾರಿ ಹಾಗೂ ಸಮರ್ಥ ನಾಯಕನಾಗಿದ್ದ ಹಾಗೂ ಆಸ್ತಿಕ ಕೂಡಾ ಆಗಿದ್ದನು. ಆದರೆ ತಾನು ವಿಜಯನಗರದ ದೊರೆಯಲ್ಲವೆಂಬ ವಾಸ್ತವವು ಆತನನ್ನು ಆಗೊಮ್ಮೆ ಈಗೊಮ್ಮೆ ಹತಾಶೆಯ ಅಂಚಿಗೆ ದೂಡುತ್ತಿತ್ತು ಮತ್ತು ಆತನನ್ನು ಓರ್ವ ಕ್ರೂರಿ, ಮಹತ್ವಾಕಾಂಕ್ಷಿಯನ್ನಾಗಿ ಮಾಡಿತ್ತು. ವಿಜಯನಗರದ ಸಿಂಹಾಸನಕ್ಕೆ ಅಳಿಯ ರಾಮರಾಯ ಅತ್ಯಂತ ಸಮರ್ಥ ಉತ್ತರಾಧಿಕಾರಿಯಾಗಿದ್ದರೂ, ಆತ ಹೊರಗಿನವನಾಗಿಯೇ ಉಳಿದುಕೊಂಡ. ಆತನ ದುರಹಂಕಾರ ಹಾಗೂ ಕಲ್ಯಾಣ ನಗರದ (ಈಗಿನ ಬಸವಕಲ್ಯಾಣ) ಬಗ್ಗೆ ಆತನಿಗಿದ್ದ ವ್ಯಾಮೋಹವು, ಆತನನ್ನು ದಖ್ಖಣದ ಸುಲ್ತಾನರ ಜೊತೆ ಸಂಘರ್ಷಕ್ಕಿಳಿಯುವಂತೆ ಮಾಡಿತ್ತು. ಉತ್ತರ ಭಾರತದಲ್ಲಿ ನಡೆದ ಎರಡನೇ ಪಾಣಿಪತ್ (1556) ಯುದ್ಧದ ಕೆಲವೇ ವರ್ಷಗಳ ಬಳಿಕ ನಡೆದ ತಾಳಿಕೋಟೆ ಕದನವು ದಖ್ಖಣ ಪ್ರಸ್ಥಭೂಮಿ ಹಾಗೂ ದಕ್ಷಿಣ ಭಾರತದ ನಕಾಶೆಯನ್ನೇ ಶಾಶ್ವತವಾಗಿ ಬದಲಾಯಿಸಿಬಿಟ್ಟಿತು ಮತ್ತು ಭಾರತೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ತೆರೆಯಿತು.
 1565ರಲ್ಲಿ ನಡೆದ ಈ ಐತಿಹಾಸಿಕ ಸಂಘರ್ಷದ ಬೀಜವನ್ನು 250 ವರ್ಷಗಳ ಮೊದಲು, ಅಂದರೆ ದಿಲ್ಲಿಯ ಸುಲ್ತಾನರು, ಅಲ್ಲಾವುದ್ದೀನ್ ಖಿಲ್ಜಿ (1296-1316) ಹಾಗೂ ಮುಹಮ್ಮದ್ ತುಘಲಕ್(1325-51) ಅವರ ಆಡಳಿತಾವಧಿಯಲ್ಲಿ ದಿಲ್ಲಿ ಸುಲ್ತಾನರ ಪಡೆಗಳು ಸಾಮ್ರಾಜ್ಯ ವಿಸ್ತರಣೆಗಾಗಿ ದಕ್ಷಿಣ ಭಾರತದ ಮೇಲೆ ದಾಳಿ ನಡೆಸಿದಾಗಲೇ ಬಿತ್ತಲಾಗಿತ್ತು. ಕೆಲವು ದಶಕಗಳವರೆಗೆ ಈ ಆಡಳಿತಗಾರರು ದಕ್ಷಿಣ ಭಾರತ ಸೇರಿದಂತೆ ಇಡೀ ಭಾರತ ಉಪಖಂಡದ ಮೇಲೆ ಬಿಗಿಯಾದ ಹಿಡಿತವನ್ನು ಹೊಂದಿದ್ದರು. ಆದಾಗ್ಯೂ, 14ನೇ ಶತಮಾನದ ಮಧ್ಯದವರೆಗೆ ಬಂಡಾಯಗಳನ್ನು ಎದುರಿಸಬೇಕಾಗಿ ಬಂದಿದ್ದರಿಂದ ತುಘಲಕ್, ಸಾಮ್ರಾಜ್ಯ ವಿಸ್ತರಿಸುವ ಆಕಾಂಕ್ಷೆ ಕೈಬಿಟ್ಟು ದಿಲ್ಲಿಗೆ ಹಿಂದೆ ಸರಿದ. ಆಗ ದಖ್ಖಣದಿಂದ ಗುಲ್ಬರ್ಗದವರೆಗೆ (ಈಗಿನ ಕಲಬುರಗಿ) ಆಳ್ವಿಕೆ ನಡೆಸಿದ್ದ ಬಹಮನಿ ಸಾಮ್ರಾಜ್ಯ (1347ರಲ್ಲಿ ಸ್ಥಾಪನೆ) ಹಾಗೂ ಹಂಪೆ ರಾಜಧಾನಿಯಾಗಿದ್ದು, ದಕ್ಷಿಣ ಭಾರತದ ಬಹುತೇಕ ಭಾಗಗಳನ್ನು ಒಳಗೊಂಡಿದ್ದ ವಿಜಯನಗರ ಸಾಮ್ರಾಜ್ಯ (1336ರಲ್ಲಿ ಸ್ಥಾಪನೆ)ಗಳು ಉಚ್ಛ್ರಾಯಸ್ಥಿತಿಯನ್ನು ತಲುಪಿದವು. ಕೃಷ್ಣ ಹಾಗೂ ತುಂಗಾ-ಭದ್ರಾ ನದಿಗಳ ನಡುವಿನ ಫಲವತ್ತಾದ ಭೂಪ್ರದೇಶವಾದ ರಾಯಚೂರು ದೋವಬ್ ಈ ಎರಡು ಮಹಾನ್ ಸಾಮ್ರಾಜ್ಯಗಳ ಪ್ರಾಕೃತಿಕ ಗಡಿಯಾಗಿತ್ತು. ಈ ಪ್ರಾಂತದ ಮೇಲೆ ನಿಯಂತ್ರಣ ಸಾಧಿಸಲು ಎರಡೂ ಸಾಮ್ರಾಜ್ಯಗಳ ನಡುವೆ ಆಗಾಗ ಕದನ ಭುಗಿಲೇಳುತ್ತಿತ್ತು.
ಕೃಷ್ಣದೇವರಾಯನ ಆಳ್ವಿಕೆಯಲ್ಲಿ, ವಿಜಯನಗರ ಸಾಮ್ರಾಜ್ಯವು ತನ್ನ ವೈಭವದ ಪರಾಕಾಷ್ಠೆಯನ್ನು ಕಂಡಿತ್ತು, ಅತ್ಯಂತ ವಿಶಾಲ ಹಾಗೂ ಶಕ್ತಿಶಾಲಿಯಾದ ವಿಜಯನಗರ ಸಾಮ್ರಾಜ್ಯವು ಮೂರು ದಿಕ್ಕುಗಳಲ್ಲಿ ಸಮುದ್ರದವರೆಗೆ ವ್ಯಾಪಿಸಿತ್ತು. ಆ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ಹಂಪೆಯ ಶ್ರೀಮಂತಿಕೆಯನ್ನು ದಾಖಲಿಸಿ ಕೊಂಡಿದ್ದಾರೆ. 15ನೇ ಶತಮಾನದಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದ ಅಬ್ದುಲ್ ರಝಾಕ್ ಎಂಬ ಪರ್ಶಿಯನ್ ಪ್ರವಾಸಿಗ ಹೀಗೆ ಬರೆದಿದ್ದಾನೆ ‘‘ಈ ರಾಜ್ಯವು ಎಷ್ಟು ಸಮೃದ್ಧವಾಗಿದೆಯೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ರಾಜನ ಬೊಕ್ಕಸದಲ್ಲಿ ಹಲವಾರು ಕೊಠಡಿಗಳಿದ್ದು, ಅದರಲ್ಲಿ ಚಿನ್ನದ ರಾಶಿ ತುಂಬಿ ತುಳುಕುತ್ತಿದೆ. ನಾಡಿನ ಜನರೆಲ್ಲರೂ, ಅವರು ಶ್ರೀಮಂತರಿರಲಿ ಅಥವಾ ಬಡವರಿರಲಿ, ಅಷ್ಟೇಕೆ ಬಝಾರ್‌ನಲ್ಲಿರುವ ಕರಕುಶಲಕರ್ಮಿಗಳು ಕೂಡಾ ಚಿನ್ನಾಭರಣಗಳನ್ನು ಧರಿಸುತ್ತಾರೆ. ಅವರೆಲ್ಲರೂ ತಮ್ಮ ಕಿವಿಗಳು, ಕೊರಳು, ತೋಳುಗಳು, ಮಣಿಕಟ್ಟು ಹಾಗೂ ಬೆರಳುಗಳಲ್ಲಿ ಆಭರಣಗಳನ್ನು ಧರಿಸು ತ್ತಾರೆ. (ಪುಸ್ತಕಕೃತಿ: ವಿಜಯನಗರ, ಸಂಪಾದನೆ ಹಾಗೂ ನಿರೂಪಣೆ ವಸುಂಧರಾ ಫಿಯೊಝಾಟ್ 1977).
  ಇದೇ ಅವಧಿಯಲ್ಲಿ ಬಹುಮನಿ ಸಾಮ್ರಾಜ್ಯದಲ್ಲಿನ ಅನೈಕ್ಯತೆಯಿಂದಾಗಿ, 16ನೇ ಶತಮಾನದ ಆರಂಭದಲ್ಲಿ ಅದು ಬಿಜಾಪುರ, ಗೋಲ್ಕೊಂಡ, ಅಹ್ಮದ್‌ನಗರ, ಬೀದರ್ ಹಾಗೂ ಬಿರಾರ್ ಹೀಗೆ ಐದು ಪ್ರತ್ಯೇಕ ಸುಲ್ತಾನಶಾಹಿಗಳಾಗಿ ವಿಭಜನೆಗೊಂಡಿತ್ತು. ಇವೆಲ್ಲವೂ ಶ್ರೀಮಂತ ಹಾಗೂ ಪ್ರಭಾವಿ ಸಾಮ್ರಾಜ್ಯಗಳಾಗಿದ್ದು, ಅವುಗಳ ಸುಲ್ತಾನರು ಪರಸ್ಪರ ಕಚ್ಚಾಡುತ್ತಿದ್ದರು. ವಿಜಯನಗರ ಸಾಮ್ರಾಜ್ಯವು ವ್ಯೆಹಾತ್ಮಕವಾಗಿ, ಒಂದಲ್ಲಾ ಒಂದು ಸುಲ್ತಾನನ ಜೊತೆ ಮೈತ್ರಿಯನ್ನು ಬೆಳೆಸಿಕೊಂಡಿ ರುತ್ತಿತ್ತು. ಸುಲ್ತಾನಶಾಹಿಯಲ್ಲೊಂದರ ಜೊತೆ ವಿಜಯನಗರದ ನಡುವೆ ನೇರ ಯುದ್ಧ ನಡೆದಾಗ, ವಿಜಯನಗರ ಜಯಗಳಿಸಿತ್ತು. ಹಾಗೆಯೇ 1520ರಲ್ಲಿ ರಾಯಚೂರಿನಲ್ಲಿ ನಡೆದ ಕಾಳಗದಲ್ಲಿಯೂ ಕೃಷ್ಣದೇವರಾಯ, ಬಿಜಾಪುರ ಸುಲ್ತಾನನ್ನು ಸೋಲಿಸಿದ್ದನು.
   ಹಾಗಾದರೆ ನಿರಂತರವಾಗಿ ತಮ್ಮಳಗೆ ಕಚ್ಚಾಡುತ್ತಿದ್ದ ಸಣ್ಣ ಸಾಮ್ರಾಜ್ಯಗಳ ಗುಂಪೊಂದರಿಂದ ವಿಜಯನಗರದಂತಹ ಮಹಾನ್ ಸಾಮ್ರಾಜ್ಯವು ಯಾಕೆ ನಾಶಗೊಂಡಿತು:?. ಭೀಕರ ತಾಳಿಕೋಟೆ ಕದನದಲ್ಲಿ ಇದು ಸಂಭವಿಸಿತು.
ಯುದ್ಧಭೂಮಿ ರಕ್ಕಸತಂಗಡಿ
ಕಾರಿನಲ್ಲಿ ನೀವು ಪ್ರಯಾಣಿಸಿದರೆ, ಹಂಪೆಯಿಂದ ಕೃಷ್ಣಾ ನದಿ ಪ್ರದೇಶವನ್ನು ತಲುಪಲು ಮೂರು ತಾಸುಗಳು ಬೇಕಾಗುತ್ತವೆ. ಈ ಸ್ಥಳದಲ್ಲೇ, 1565ರಲ್ಲಿ ರಕ್ಕಸಗಿ ಹಾಗೂ ತಂಗಡಗಿ ಎಂಬ ಗ್ರಾಮಗಳ ಸಮೀಪದಲ್ಲಿ ಈ ಭೀಕರ ಕಾಳಗ ನಡೆಯಿತು. ಹಂಪೆಯ ಗ್ರಾಮಗಳನ್ನು ತಲುಪಬೇಕಾದರೆ, ರಾಯಚೂರ್ ದಾವೊಬ್‌ನ ಫಲವತ್ತಾದ ಪ್ರದೇಶವನ್ನು ಹಾದುಹೋಗಬೇಕಾಗುತ್ತದೆ. ಈಗಲೂ ರಾಯಚೂರು ದಾವೊಬ್, ‘ಕರ್ನಾಟಕದ ಅಕ್ಕಿಯ ಕಣಜ’ ಎಂದೇ ಪ್ರಖ್ಯಾತವಾಗಿದೆ. ಈ ಎರಡೂ ಗ್ರಾಮಗಳು ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿವೆ. ರಾಜ್ಯದ ಈ ಭಾಗದ ಇತರ ಹಲವಾರು ಗ್ರಾಮಗಳಂತೆ ಇಲ್ಲಿಯೂ ಸಾಕಷ್ಟು ಕಬ್ಬನ್ನು ಬೆಳೆಯಲಾಗುತ್ತಿದೆ.
 ಕದನದ ನಿಖರ ಸ್ಥಳದ ಬಗ್ಗೆ ಇತಿಹಾಸಕಾರರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರಬಹುದಾದರೂ, ಇಲ್ಲಿನ ಬಯಲುಪ್ರದೇಶದಲ್ಲಿಯೇ ಎರಡು ಸೇನೆಗಳ ನಡುವೆ ಸಂಘರ್ಷ ನಡೆಯಿತೆಂಬ ಬಗ್ಗೆ ಅವರಲ್ಲಿ ಸಾಮಾನ್ಯವಾದ ಸಹಮತವಿದೆ. ಈ ಕಾಳಗವನ್ನು ತಾಳಿಕೋಟೆ ಸಮರವೆಂದು ಕರೆಯಲಾಗುತ್ತದೆಯಾದರೂ, ಆ ಪಟ್ಟಣದಲ್ಲಿ ಸಣ್ಣ ಮಟ್ಟದ ಯುದ್ಧಚಟುವಟಿಕೆಯಷ್ಟೇ ಏರ್ಪಟ್ಟಿತ್ತು. ರಕ್ಕಸಗಿಯಿಂದ 50 ಕಿ.ಮೀ. ದೂರದಲ್ಲಿರುವ ತಾಳಿಕೋಟೆಯು, ಬಹುಮನಿ ಸುಲ್ತಾನ ಸೈನ್ಯಗಳು ಜಮಾವಣೆಯಾಗುವ ಕೇಂದ್ರವಾಗಿತ್ತು.

Writer - ವಿಖಾರ್ ಅಹ್ಮದ್ ಸಯೀದ್

contributor

Editor - ವಿಖಾರ್ ಅಹ್ಮದ್ ಸಯೀದ್

contributor

Similar News

ಜಗದಗಲ
ಜಗ ದಗಲ