ಅರುಣಾಚಲ ಮಹಿಳಾ ತಂಡ 14 ರನ್‌ಗೆ ಆಲೌಟ್

Update: 2019-01-15 18:55 GMT

ಹೊಸದಿಲ್ಲಿ, ಜ.15: ಅರುಣಾಚಲ ಪ್ರದೇಶದ ಮಹಿಳಾ ಅಂಡರ್-23 ತಂಡ ಮಂಗಳವಾರ ನಡೆದ ಹಿಮಾಚಲ ಪ್ರದೇಶ ವಿರುದ್ಧ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಕೇವಲ 14 ರನ್‌ಗೆ ಆಲೌಟಾಗಿ ಮುಜುಗರ ಎದುರಿಸಿದೆ.

ಬಿಸಿಸಿಐ ಆಯೋಜಿತ ಮಹಿಳಾ ಲೀಗ್ ಹಾಗೂ ನಾಕೌಟ್ ಅಂಡರ್-23 ಟಿ-20 ಟೂರ್ನಿಯಲ್ಲಿ ಹಿಮಾಚಲ ಪ್ರದೇಶ 1.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಬ್ಯಾಟಿಂಗ್ ಆಯ್ದುಕೊಂಡ ಅರುಣಾಚಲ ಪ್ರದೇಶ ಇನಿಂಗ್ಸ್ 11 ಓವರ್‌ಗಳಲ್ಲಿ ಕೊನೆಗೊಂಡಿತು. ಈ ವೇಳೆ ಅದು ಸ್ಕೋರ್ ಬೋರ್ಡ್‌ನಲ್ಲಿ ಕೇವಲ 14ರ ನ್ ಗಳಿಸಿತು. ಏಳು ಆಟಗಾರ್ತಿಯರು ರನ್ ಖಾತೆ ತೆರೆಯಲು ವಿಫಲರಾದರು. ಹಿಮಾಚಲ ಪ್ರದೇಶದ ಪ್ರಾಚಿ ಚೌಹಾಣ್ 1 ರನ್‌ಗೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ರವಿವಾರ ನಡೆದ ಅಂತರ್‌ರಾಷ್ಟ್ರೀಯ ಮಹಿಳಾ ಟಿ-20 ಪಂದ್ಯವೊಂದರಲ್ಲಿ ಚೀನಾ ತಂಡ ಯುಎಇ ವಿರುದ್ಧ ಕೇವಲ 14 ರನ್‌ಗೆ ಆಲೌಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News