ಅಮೆರಿಕ ಶಟ್‌ಡೌನ್‌ನಿಂದ ಬಾಧಿತರಾದವರಿಗೆ ಸಿಖ್ ಸಮುದಾಯದಿಂದ ಉಚಿತ ಊಟ

Update: 2019-01-17 05:47 GMT

ಹೋಸ್ಟನ್, ಜ.17: ಅಮೆರಿಕದಲ್ಲಿ ಸಾವಿರಾರು ಮಂದಿಗೆ ವೇತನವಿಲ್ಲದಂತೆ ಮಾಡಿರುವ ಶಟ್‌ಡೌನ್ ಅಥವಾ ಸರಕಾರಿ ಸೇವೆಗಳ ಸ್ಥಗಿತದಿಂದ ಬಾಧಿತರಾಗಿರುವ ಅಲ್ಲಿನ ಸರಕಾರಿ ಉದ್ಯೋಗಿಗಳಿಗೆ ಟೆಕ್ಸಾಸ್‌ನ ಸ್ಯಾನ್ ಅಂಟೋನಿಯೋದ ಸಿಖ್ ಸಮುದಾಯ ಉಚಿತ ಆಹಾರವನ್ನು ಒದಗಿಸಿ ಮಾನವೀಯತೆ ಮೆರೆದಿದೆ.

ಜನವರಿ 11ರಿಂದ ಮೂರು ದಿನಗಳ ಕಾಲ ಸಿಖ್ ಸಮುದಾಯ ಬಿಸಿಬಿಸಿಯಾದ ಸಸ್ಯಾಹಾರಿ ಊಟವನ್ನು ಸಾವಿರಾರು ಮಂದಿಗೆ ವಿತರಿಸಿದೆ. ಗುರುದ್ವಾರದ ಮೆನುವಿನಂತೆ ಬೇಳೆ, ತರಕಾರಿಗಳು, ಅನ್ನ ಮತ್ತು ಚಪಾತಿ ತಯಾರಿಸಿ ವಿತರಿಸಲಾಗಿದೆ. ಈ ಸಮಾಜ ಸೇವಾ ಕೈಂಕರ್ಯದ ಬಗ್ಗೆ ತಿಳಿಯುತ್ತಲೇ ಹಲವಾರು ಸ್ವಯಂಸೇವಕರು ಈ ಕಾರ್ಯದಲ್ಲಿ ಕೈಜೋಡಿಸಿದ್ದರು.

ಸ್ಯಾನ್ ಅಂಟೋನಿಯೋದ ಸಿಖ್ ಸೆಂಟರ್ ನಗರದ ಅತ್ಯಂತ ಹಳೆಯ ಗುರುದ್ವಾರಗಳಲ್ಲೊಂದಾಗಿದ್ದು, 2001ರಲ್ಲಿ ಸ್ಥಾಪಿತವಾಗಿತ್ತು. ಅದು ದೇಶಕ್ಕೆ ವಲಸೆ ಬಂದ ಹೊಸಬರಿಗೆ ಅಗತ್ಯ ಆಹಾರ, ಬಟ್ಟೆಬರೆ ಮತ್ತು ವಸತಿ ಸೌಲಭ್ಯವನ್ನೂ ಒದಗಿಸುತ್ತದೆ.

ನಾಲ್ಕನೇ ವಾರ ಪ್ರವೇಶಿಸಿದ ಅಮೆರಿಕದ ಭಾಗಶ: ಸರಕಾರಿ ಸೇವೆಗಳ ಸ್ಥಗಿತದಿಂದ ವಿವಿಧ ಪ್ರಮುಖ ಇಲಾಖೆಗಳ 8 ಲಕ್ಷಕ್ಕೂ ಅಧಿಕ ಸರಕಾರಿ ಉದ್ಯೋಗಿಗಳು ಕೆಲಸವಿಲ್ಲದೆ ಸಮಸ್ಯೆಯಲ್ಲಿ ಸಿಲುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News