ದಿಲ್ಲಿಯಲ್ಲಿ ದಟ್ಟ ಮಂಜು ಕವಿದ ಹಿನ್ನೆಲೆ: ಹಲವು ವಿಮಾನ, ರೈಲುಗಳ ಸಂಚಾರ ವಿಳಂಬ

Update: 2019-01-18 05:30 GMT

ಹೊಸದಿಲ್ಲಿ, ಜ.18: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಕನಿಷ್ಠ 12 ವಿಮಾನಗಳು ಶುಕ್ರವಾರ ಬೆಳಗ್ಗೆ ಸುಮಾರು ಮೂರು ಗಂಟೆಗಳ ಹಾರಾಟ ನಡೆಸದೇ ದಿಲ್ಲಿ ಏರ್‌ಪೋರ್ಟ್‌ನಲ್ಲಿ ಬಾಕಿಯಾಗಿವೆ. ಹಲವು ರೈಲುಗಳು ಮಂದಬೆಳಕಿನ ಹಿನ್ನೆಲೆಯಲ್ಲಿ ನಿಧಾನವಾಗಿ ಸಂಚರಿಸುತ್ತಿವೆ.

 ಬೆಳಗ್ಗೆ 5:30ರಿಂದ 7 ಗಂಟೆಯ ತನಕ ಇಂದಿರಾಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂಗೆ ಬರಬೇಕಾಗಿದ್ದ ವಿಮಾನಗಳಿಗೆ ದಟ್ಟ ಮಂಜಿನ ಸಮಸ್ಯೆ ಕಾಡುತ್ತಿದ್ದು, ಸಿಂಗಾಪುರದಿಂದ ಬಂದ ಒಂದು ಅಂತರ್‌ರಾಷ್ಟ್ರೀಯ ವಿಮಾನವನ್ನು ಬೇರೆ ಏರ್‌ಪೋರ್ಟ್‌ಗೆ ಕಳುಹಿಸಿಕೊಡಲಾಗಿದೆ.

  ದಿಲ್ಲಿ ವಿಮಾನ ನಿಲ್ದಾಣ ದೇಶದಲ್ಲಿ ಅತ್ಯಂತ ಬಿಡುವಿಲ್ಲದ ಏರ್‌ಪೋರ್ಟ್. ಪ್ರತಿ ಗಂಟೆಗೆ ನಿರ್ಗಮನ ಹಾಗೂ ಆಗಮನ ಸಹಿತ ಸರಾಸರಿ 70 ವಿಮಾನಗಳು ಚಲಿಸುತ್ತವೆ. ರಾಜಧಾನಿಗೆ ಬರಬೇಕಾಗಿದ್ದ 10 ರೈಲುಗಳು ಕನಿಷ್ಠ ಆರರಿಂದ 2 ಗಂಟೆ ವಿಳಂಬವಾಗಿ ಚಲಿಸುತ್ತಿವೆ. ಒಡಿಶಾದ ಪುರಿಯಿಂದ ಬರುವ ಪುರುಷೋತ್ತಮ ಎಕ್ಸ್‌ಪ್ರೆಸ್ ಆರು ಗಂಟೆ ವಿಳಂಬವಾಗಿ ಹಾಗೂ ಬಿಹಾರದ ಗಯಾದಿಂದ ಬರುತ್ತಿರುವ ಮಹಾಬೋಧಿ ಎಕ್ ್ಸಪ್ರೆಸ್ ಐದು ಗಂಟೆ ವಿಳಂಬವಾಗಿ ಸಂಚರಿಸುತ್ತಿದೆ ಎಂದು ವರದಿಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News