ಆಸ್ಟ್ರೇಲಿಯದಲ್ಲಿ ಶ್ರೇಷ್ಠ ಬೌಲಿಂಗ್: ಅಗರ್ಕರ್ ದಾಖಲೆ ಸರಿಗಟ್ಟಿದ ಚಹಾಲ್

Update: 2019-01-18 09:24 GMT

ಮೆಲ್ಬೋರ್ನ್, ಜ.18: ಆಸ್ಟ್ರೇಲಿಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್ ಸಂಘಟಿಸಿದ ಭಾರತದ ಸ್ಪಿನ್ನರ್ ಯಜುವೇಂದ್ರ ಚಹಾಲ್ ತಮ್ಮದೇ ದೇಶದ ಮಾಜಿ ಬೌಲರ್ ಅಜಿತ್ ಅಗರ್ಕರ್ ದಾಖಲೆ ಸರಿದೂಗಿಸಿದರು.

28ರ ಹರೆಯದ ಚಹಾಲ್ ಆಸೀಸ್ ವಿರುದ್ಧ 3ನೇ ಏಕದಿನದಲ್ಲಿ 10 ಓವರ್‌ಗಳಲ್ಲಿ 42 ರನ್‌ಗೆ ಆರು ವಿಕೆಟ್‌ಗಳನ್ನು ಉರುಳಿಸಿದರು. 15 ವರ್ಷಗಳ ಹಿಂದೆ ಅಜಿತ್ ಅಗರ್ಕರ್ ಇದೇ ಮೈದಾನದಲ್ಲಿ 42 ರನ್ ನೀಡಿ ಆರು ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಚಹಾಲ್ ಏಕದಿನ ಕ್ರಿಕೆಟ್‌ನಲ್ಲಿ 6ನೇ ಶ್ರೇಷ್ಠ ಬೌಲಿಂಗ್(6/42)ಸಂಘಟಿಸಿದರು. ಆಸೀಸ್ ನೆಲದಲ್ಲಿ ಆರು ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.

ಕುಲ್‌ದೀಪ್ ಯಾದವ್‌ರಿಂದ ತೆರವಾದ ಸ್ಥಾನಕ್ಕೆ ಬಂದ ಲೆಗ್ ಸ್ಪಿನ್ನರ್ ಚಹಾಲ್ ತಾನೆಸೆದ ಮೊದಲ ಓವರ್‌ನಲ್ಲಿ ಶಾನ್ ಮಾರ್ಷ್ ಹಾಗೂ ಉಸ್ಮಾನ್ ಖ್ವಾಜಾ ವಿಕೆಟನ್ನು ಉರುಳಿಸಿದರು. 2 ಓವರ್‌ಗಳ ಬಳಿಕ ಮಾರ್ಕಸ್ ಸ್ಟೋನಿಸ್ ವಿಕೆಟ್ ಪಡೆದರು. ಆ ಬಳಿಕ ಡೆತ್ ಓವರ್‌ನಲ್ಲಿ ಮತ್ತೆ ಬೌಲಿಂಗ್ ಮಾಡಿದ ಚಹಾಲ್, ರಿಚರ್ಡ್‌ಸನ್, ಹ್ಯಾಂಡ್ಸ್‌ಕಾಂಬ್ ಹಾಗೂ ಝಾಂಪ ವಿಕೆಟನ್ನು ಕಬಳಿಸಿ ಆರು ವಿಕೆಟ್ ಗೊಂಚಲು ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News