ಬ್ರಿಟನ್ ಚುನಾವಣೆ: ಲೇಬರ್ ಪಕ್ಷದಿಂದ ಭಾರತೀಯರ ಓಲೈಕೆ ಆರಂಭ

Update: 2019-01-18 14:39 GMT

ಲಂಡನ್, ಜ. 18: ಮುಂದಿನ ರಾಷ್ಟ್ರೀಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಬ್ರಿಟನ್‌ನ ಲೇಬರ್ ಪಕ್ಷವು, ದೇಶದಲ್ಲಿರುವ 15 ಲಕ್ಷ ಭಾರತೀಯ ಸಮುದಾಯದ ಓಲೈಕೆಗೆ ಮುಂದಾಗಿದೆ.

ಪಕ್ಷದೊಳಗೆ ಇರುವ ಭಾರತ-ಕೇಂದ್ರಿತ ಲಾಬಿಯೊಂದು ಬುಧವಾರ ಭಾರತದೊಂದಿಗೆ ಬ್ರಿಟನ್ ಹೊಂದಿರುವ ಐತಿಹಾಸಿಕ ಹಾಗೂ ಬಲಿಷ್ಠ ಬಾಂಧವ್ಯವನ್ನು ನೆನಪಿಸಿದೆ ಹಾಗೂ ಭಾರತೀಯ ಸಮುದಾಯದ ಸಮಸ್ಯೆಗಳನ್ನು ಎತ್ತಿಹಿಡಿಯುವುದಾಗಿ ಭರವಸೆ ನೀಡಿದೆ.

1999ರಲ್ಲಿ ಸ್ಥಾಪಿಸಲಾಗಿರುವ ‘ಲೇಬರ್ ಫ್ರೆಂಡ್ಸ್ ಆಫ್ ಇಂಡಿಯ’ ಗುಂಪಿಗೆ ಬುಧವಾರ ಮರುಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಹೈಕಮಿಶನರ್ ರುಚಿ ಘನಶ್ಯಾಮ್, ಲೇಬರ್ ಪಕ್ಷದ ಪದಾಧಿಕಾರಿಗಳಾದ ಜಾನ್ ಮೆಕ್‌ಡೊನೆಲ್ ಮತ್ತು ಬ್ಯಾರಿ ಗಾರ್ಡಿನರ್, ಕೌನ್ಸಿಲರ್‌ಗಳು ಮತ್ತು ಕಾರ್ಯಕರ್ತರು ಭಾಗವಹಿಸಿದರು.

ಲಂಡನ್‌ನ ಉಪ ಮೇಯರ್ ರಾಜೇಶ್ ಅಗರ್ವಾಲ್ ಹಾಗೂ ಬ್ರಿಸ್ಟಲ್ ನಾರ್ತ್-ವೆಸ್ಟ್‌ನ ಲೇಬರ್ ಸಂಸದ ಡ್ಯಾರೆನ್ ಜೋನ್ಸ್ ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News