ರಾಹುಲ್ ಪ್ರಧಾನಿಯಾಗಬೇಕೆಂಬುದು ತಮಿಳುನಾಡಿನ ಜನತೆಯ ಆಶಯ: ಸ್ಟಾಲಿನ್

Update: 2019-01-20 12:50 GMT

ಚೆನ್ನೈ, ಜ.20: ಮುಂಬರುವ ಲೋಕಸಭಾ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿಯವರ ಹೆಸರನ್ನು ಪ್ರಸ್ತಾವಿಸಿ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಇದೀಗ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ತಾನು ತಮಿಳುನಾಡಿನ ಜನತೆಯ ಆಶಯದ ಬಗ್ಗೆ ಮಾತನಾಡಿದ್ದೆ ಎಂದಿದ್ದಾರೆ.

ಇದರಲ್ಲಿ ತಪ್ಪೇನಿದೆ. ತಮಿಳುನಾಡಿನ ಜನತೆ ರಾಹುಲ್‌ರನ್ನು ಪ್ರಧಾನಿಯಾಗಿ ಕಾಣಲು ಬಯಸುತ್ತಿದ್ದಾರೆ. ಪ.ಬಂಗಾಳದ ಜನತೆ ಪ್ರಧಾನಿ ಹುದ್ದೆಯ ವಿಷಯವನ್ನು ಚುನಾವಣೆಯ ಬಳಿಕ ಇತ್ಯರ್ಥಗೊಳಿಸಲು ಬಯಸಿದ್ದಾರೆ. ಆಯಾ ರಾಜ್ಯಗಳ ಜನತೆಯ ಆಶಯ, ಅಭಿಪ್ರಾಯ ವಿಭಿನ್ನವಾಗಿರುವುದು ಸಹಜವಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಚೆನ್ನೈಯಲ್ಲಿ ನಡೆದಿದ್ದ ಸಭೆಯಲ್ಲಿ ಮಾತನಾಡಿದ್ದ ಸ್ಟಾಲಿನ್, ದೇಶವನ್ನು ಉಳಿಸುವುದಕ್ಕಾಗಿ ಎಲ್ಲಾ ವಿರೋಧ ಪಕ್ಷಗಳೂ ಒಗ್ಗೂಡಿ ರಾಹುಲ್ ಗಾಂಧಿಯವರ ಕೈಯನ್ನು ಬಲಪಡಿಸಬೇಕು ಎಂದು ಕರೆ ನೀಡಿದ್ದರು.

ಶನಿವಾರ ಕೋಲ್ಕತಾದಲ್ಲಿ ನಡೆದಿದ್ದ ವಿಪಕ್ಷಗಳ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಸ್ಟಾಲಿನ್, 2019ರ ಲೋಕಸಭಾ ಚುನಾವಣೆಯನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಬಣ್ಣಿಸಿದ್ದರು. ಮೋದಿಯನ್ನು ಸೋಲಿಸಿ ದೇಶ ಉಳಿಸಿ ಎಂಬುದು ವಿಪಕ್ಷಗಳ ಕರೆಯಾಗಿದೆ. ಮಮತಾ ಬ್ಯಾನರ್ಜಿ ಉಕ್ಕಿನ ಮಹಿಳೆಯಾಗಿರುವ ಕಾರಣ ಮೋದಿ-ಶಾ ಜೋಡಿಗೆ ಕೋಲ್ಕತಾ ಪ್ರವೇಶಿಸಲೂ ಭಯವಾಗುತ್ತಿದೆ ಎಂದು ಸ್ಟಾಲಿನ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News