ಆಸ್ಟ್ರೇಲಿಯ ತಂಡಕ್ಕೆ ಪ್ಯಾಟರ್ಸನ್ ಸೇರ್ಪಡೆ

Update: 2019-01-21 18:56 GMT

ಸಿಡ್ನಿ, ಜ.21: ಭಾರತದ ವಿರುದ್ಧ ಸರಣಿಯಲ್ಲಿ ಬ್ಯಾಟಿಂಗ್‌ವೈಫಲ್ಯ ಅನುಭವಿಸಿದ್ದ ಆಸ್ಟ್ರೇಲಿಯ ತಂಡವು ಆ ತಪ್ಪು ಮರುಕಳಿಸಬಾರದೆಂಬ ಹಿನ್ನೆಲೆಯಲ್ಲಿ ಶ್ರೀಲಂಕಾದ ವಿರುದ್ಧದ ಟೆಸ್ಟ್ ಸರಣಿಗೆ ಅತ್ಯುತ್ತಮ ಲಯದಲ್ಲಿರುವ ದಾಂಡಿಗ ಕರ್ಟಿಸ್ ಪ್ಯಾಟರ್ಸನ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ನ್ಯೂ ಸೌತ್ ವೇಲ್ಸ್‌ನ 25 ವರ್ಷದ ಬ್ಯಾಟ್ಸಮನ್ ಕರ್ಟಿಸ್, ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ತಂಡವನ್ನು ಪ್ರತಿನಿಧಿಸಿ ಕಳೆದ ವಾರ ಹೋಬರ್ಟ್‌ನಲ್ಲಿ ಶತಕಗಳ ಮೇಲೆ ಶತಕ ದಾಖಲಿಸಿ ಮಿಂಚಿದ್ದರು.

‘‘ಪ್ಯಾಟರ್ಸನ್ ಉತ್ತಮ ಪ್ರದರ್ಶನದಿಂದ ತಮ್ಮ ಗಮನ ಸೆಳೆಯುತ್ತಲೇ ಇದ್ದರು’’ ಎಂದು ಆಸ್ಟ್ರೇಲಿಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವೊರ್ ಹಾನ್ಸ್ ಹೇಳಿದ್ದಾರೆ.

ನ್ಯೂ ಸೌತ್ ವೇಲ್ಸ್ ಪರ ಎರಡು ಅಜೇಯ ಶತಕಗಳ ಮೂಲಕ ಸ್ಥಿರ ಪ್ರದರ್ಶನ ತೋರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಹಾನ್ಸ್ ಹೇಳಿದ್ದಾರೆ.

ಗುರುವಾರ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯ ತಂಡ ಶ್ರೀಲಂಕಾ ವಿರುದ್ಧ ಹೊನಲು ಬೆಳಕಿನ ಟೆಸ್ಟ್ ಪಂದ್ಯವನ್ನು ಆರಂಭಿಸಲಿದೆ. ಕ್ಯಾನ್‌ಬೆರಾದಲ್ಲಿ ಎರಡನೇ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News