ಚೀನಾದ ಕುಟುಂಬ ಯೋಜನೆ ನೀತಿ ಸಂಪೂರ್ಣ ಹಿಂದಕ್ಕೆ?

Update: 2019-01-22 17:27 GMT

ಬೀಜಿಂಗ್, ಜ. 22: ಮುಂಬರುವ ಸಂಸತ್ ಅಧಿವೇಶನದಲ್ಲಿ ಚೀನಾವು ತನ್ನ ಕುಟುಂಬ ಯೋಜನೆ ನೀತಿಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆದುಕೊಂಡು, ತಮಗೆ ಬೇಕಾದಷ್ಟು ಮಕ್ಕಳನ್ನು ಹೊಂದಲು ನಾಗರಿಕರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸಬಹುದಾಗಿದೆ ಎಂದು ಜನಸಂಖ್ಯಾ ನೀತಿ ಪರಿಣತರೊಬ್ಬರು ಹೇಳಿದ್ದಾರೆ.

ಕಳೆದ ವರ್ಷದ ಪೂರೈಸಲಾದ ಕರಡು ನಾಗರಿಕ ಸಂಹಿತೆಯಿಂದ ಕುಟುಂಬ ಯೋಜನೆ ನೀತಿಗೆ ಸಂಬಂಧಿಸಿದ ಅಂಶಗಳನ್ನು ಹಿಂದಕ್ಕೆ ಪಡೆದುಕೊಳ್ಳಬಹುದಾಗಿದೆ ಎಂದು ಪೀಕಿಂಗ್ ವಿಶ್ವವಿದ್ಯಾನಿಲಯದ ಜನಸಂಖ್ಯಾ ಸಂಶೋಧನಾ ಸಂಸ್ಥೆಯ ವಿದ್ವಾಂಸ ಮು ಗುವಾಂಗ್‌ಝಾಂಗ್ ಅಭಿಪ್ರಾಯಪಡುತ್ತಾರೆ.

ಚೀನಾದ ಜನನ ದರ 2018ರಲ್ಲಿ 60 ವರ್ಷಗಳಲ್ಲೇ ಕನಿಷ್ಠವಾಗಿತ್ತು ಎಂಬ ವರದಿಯ ಹಿನ್ನೆಲೆಯಲ್ಲಿ, ಈಗ ಎದ್ದಿರುವ ಪ್ರಶ್ನೆ- ಕುಟುಂಬ ಯೋಜನೆ ನೀತಿಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದೇ ಎಂದಲ್ಲ, ಬದಲಿಗೆ ಯಾವಾಗ ಎನ್ನುವುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News