ರಶ್ಯ: ಅಫ್ಘಾನಿಸ್ತಾನಕ್ಕೆ ವಿಮಾನ ಅಪಹರಣ ಯತ್ನ

Update: 2019-01-22 17:31 GMT

ಮಾಸ್ಕೋ, ಜ. 22: ಸೈಬೀರಿಯದ ಸುರ್‌ಗುಟ್ ನಗರದಿಂದ ಮಾಸ್ಕೋಗೆ ಹಾರುತ್ತಿದ್ದ ಪ್ರಯಾಣಿಕ ವಿಮಾನವೊಂದನ್ನು ಅಫ್ಘಾನಿಸ್ತಾನಕ್ಕೆ ಅಪಹರಿಸುವ ವಿಫಲ ಪ್ರಯತ್ನವೊಂದು ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ವಿಮಾನ ಹಾರಾಟ ಆರಂಭಿಸಿದ ಬಳಿಕ ಪ್ರಯಾಣಿಕನೊಬ್ಬ ವಿಮಾನವನ್ನು ಅಫ್ಘಾನಿಸ್ತಾನದತ್ತ ತಿರುಗಿಸುವಂತೆ ಸೂಚಿಸಿದ ಎಂದು ರಶ್ಯದ ಭಯೋತ್ಪಾದನೆ ನಿಗ್ರಹ ಸಮಿತಿ ಹೇಳಿದೆ.

ಬಳಿಕ, ಸೈಬೀರಿಯದ ಖಾಂಟಿ ಮಾನ್ಸಿಸ್ಕ್‌ನಲ್ಲಿ ವಿಮಾನವನ್ನು ಇಳಿಸಲು ಪೈಲಟ್ ನಿರ್ಧರಿಸಿದರು ಎನ್ನಲಾಗಿದೆ.

ಪ್ರಯಾಣಿಕ ಆಯುಧ ಹೊಂದಿದ್ದನೇ ಎನ್ನುವುದು ತಿಳಿದಿಲ್ಲ. ಹೆಚ್ಚಿನ ಮಾಹಿತಿ ಲಭಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News