ವೇಗವಾಗಿ 'ಶತಕ' ಪೂರೈಸಿದ ವೇಗದ ಬೌಲರ್ ಮುಹಮ್ಮದ್ ಶಮಿ

Update: 2019-01-23 04:51 GMT

ನೇಪಿಯರ್, ಜ.23:ವೇಗದ ಬೌಲರ್ ಮುಹಮ್ಮದ್ ಶಮಿ ಬುಧವಾರ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪೂರೈಸಿದ ಭಾರತದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾದರು. ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಮಿ ಈ ಮೈಲುಗಲ್ಲು ತಲುಪಿದ್ದಾರೆ.

ಇದು 50 ಓವರ್ ಪಂದ್ಯದಲ್ಲಿ ಶಮಿ ಆಡಿದ 56ನೇ ಪಂದ್ಯವಾಗಿದೆ.

ನ್ಯೂಝಿಲೆಂಡ್‌ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ವಿಕೆಟ್‌ನ್ನು ಉರುಳಿಸಿದ ಶಮಿ 100 ವಿಕೆಟ್ ಮೈಲುಗಲ್ಲು ತಲುಪಿದರು. ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ 28ರ ಹರೆಯದ ವೇಗಿ ಶಮಿ ಬುಧವಾರ ಮೆಕ್‌ಲಿಯಾನ್ ಪಾರ್ಕ್‌ನಲ್ಲಿ ನಡೆದ ಕಿವೀಸ್ ವಿರುದ್ಧದ ಏಕದಿನ ಪಂದ್ಯದಲ್ಲೂ ತನ್ನ ಶ್ರೇಷ್ಠ ಬೌಲಿಂಗ್ ಮುಂದುವರಿಸಿದರು.

ಶಮಿಗಿಂತ ಮೊದಲು ಇರ್ಫಾನ್ ಪಠಾಣ್ 59 ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪೂರೈಸಿದ ಸಾಧನೆ ಮಾಡಿದ್ದರು. ಝಹೀರ್ ಖಾನ್(65 ಪಂದ್ಯಗಳು), ಅಜಿತ್ ಅಗರ್ಕರ್(67) ಹಾಗೂ ಜಾವಗಲ್ ಶ್ರೀನಾಥ್(68) ಕಡಿಮೆ ಪಂದ್ಯಗಳಲ್ಲಿ ವಿಕೆಟ್ ಗಳಿಕೆಯಲ್ಲಿ ಶತಕ ಪೂರೈಸಿದ ಭಾರತದ ಇತರ ಬೌಲರ್‌ಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News