ಅಪಾಯಕಾರಿ ಮಾಹಿತಿ: 9,382 ಆ್ಯಪ್ ಗಳನ್ನು ಅಳಿಸಿ ಹಾಕಿದೆ ಈ ದೇಶ

Update: 2019-01-23 17:26 GMT

ಶಾಂಘೈ, ಜ. 23: 70 ಲಕ್ಷಕ್ಕೂ ಅಧಿಕ ಆನ್‌ಲೈನ್ ಮಾಹಿತಿಗಳು ಹಾಗೂ 9,382 ಮೊಬೈಲ್ ಆ್ಯಪ್‌ಗಳನ್ನು ತಾನು ಅಳಿಸಿ ಹಾಕಿರುವುದಾಗಿ ಚೀನಾದ ಸೈಬರ್ ಕಾವಲು ಸಂಸ್ಥೆ ‘ಚೀನಾ ಸೈಬರ್‌ ಸ್ಪೇಸ್ ಆಡಳಿತ’ ಬುಧವಾರ ತಿಳಿಸಿದೆ.

ಅದೇ ವೇಳೆ, ತಂತ್ರಜ್ಞಾನ ದೈತ್ಯ ‘ಟೆನ್ಸೆಂಟ್’ನ ಸುದ್ದಿ ಆ್ಯಪ್ ‘ಅಶ್ಲೀಲ ಮಾಹಿತಿ’ಯನ್ನು ಹರಡುತ್ತಿದೆ ಎಂದು ಅದು ಆರೋಪಿಸಿದೆ.

ಅಸ್ವೀಕಾರಾರ್ಹ ಹಾಗೂ ಅಪಾಯಕಾರಿ ಮಾಹಿತಿಗಳ ಸ್ವಚ್ಛಗೊಳಿಸುವಿಕೆಯ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾವಲು ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

733 ವೆಬ್‌ಸೈಟ್‌ಗಳನ್ನೂ ಮುಚ್ಚಿರುವುದಾಗಿ ಅದು ಹೇಳಿದೆ.

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಡಳಿತದಲ್ಲಿ ಇಂಟರ್‌ನೆಟ್ ಮೇಲಿನ ನಿಯಂತ್ರಣವನ್ನು ಚೀನಾ ಬಿಗಿಗೊಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಭಿನ್ನಮತವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ 2016ರಿಂದ ತೀವ್ರಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News